ಹಲೋ ಸ್ನೇಹಿತರೆ, ಸತತ ಹನ್ನೆರಡು ವರ್ಷಗಳಿಂದ ಮುಂಭಡ್ತಿಗೆ ಕಾಯುತ್ತಿರುವ ಸರಕಾರಿ ಪ್ರೌಢಶಾಲೆಯ ಸಹಶಿಕ್ಷಕರಿಗೆ ಸರ್ಕಾರ ಸಿಹಿ ಸುದ್ದಿ ನೀಡಲು ಹೊರಡಿದೆ, ಶಾಲಾ ಶಿಕ್ಷಣ ಇಲಾಖೆಯ 4 ವಿಭಾಗಗಳಲ್ಲಿ ಸ್ನಾತಕೋತ್ತರ ಪದವಿ ಪಡೆದ ಅರ್ಹ ಸಹಶಿಕ್ಷಕರ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸುವಂತೆ ಸಿಬ್ಬಂದಿಗಳಿಗೆ ಮತ್ತು ಆಡಳಿತ ಸುಧಾರಣ ಇಲಾಖೆಗೆ ಸೂಚಿಸಿರುವುದಾಗಿ ಸಚಿವ ಎಸ್. ಮಧು ಬಂಗಾರಪ್ಪ ತಿಳಿಸಿದರು.
ಶಿಕ್ಷಕರಿಗೆ ಮುಂಭಡ್ತಿ ವಿಷಯ ಪ್ರಸ್ತಾವಿಸಿದ ಕಾಂಗ್ರೆಸ್‌ನ ಸಚಿವ ಡಾ. ಚಂದ್ರಶೇಖರ್ ಪಾಟೀಲ್, ಸರಕಾರಿ ಪ್ರೌಢಶಾಲೆಗಳ ಸಹಶಿಕ್ಷಕರು ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಭಡ್ತಿ ಸೌಲಭ್ಯ ಪಡೆಯಲು 12 ವರ್ಷಗಳಿಂದ ಕಾಯುತ್ತಿದ್ದಾರೆ. ಇನ್ನೆಷ್ಟು ಸಮಯ ಕಾಯಬೇಕು ಎಂದು ಪ್ರಶ್ನಿಸಿದರು.
ಇದನ್ನು ಓದಿ: ಮಳೆಯಿಂದ ಕೃಷಿ ಮತ್ತು ತೋಟಗಾರಿಕೆ ಬೆಳೆ ಹಾನಿಗೆ ಪರಿಹಾರ! ಮಹತ್ವದ ಮಾಹಿತಿ ನೀಡಿದ ಸಿದ್ದರಾಮಯ್ಯ
1998ರಲ್ಲಿ ಶೇ. 50ರಷ್ಟು ಉಪನ್ಯಾಸಕರ ಹುದ್ದೆಗಳ ನೇರ ನೇಮಕಾತಿ ಹಾಗೂ ಶೇ. 50 ರಷ್ಟನ್ನು ಪ್ರೌಢಶಾಲಾ ಸಹಶಿಕ್ಷಕರಿಗೆ ಮುಂಭಡ್ತಿ ನೀಡುವ ಮೂಲಕ ಖಾಲಿ ಹುದ್ದೆ ತುಂಬಲು ಅವಕಾಶ ಕಲ್ಪಿಸಲಾಗಿತ್ತು. 2014ರಲ್ಲಿ ವೃಂದ ಮತ್ತು ನೇಮಕಾತಿ ನಿಯಮ ಪರಿಷ್ಕರಣೆ ಮಾಡಲಾಗಿದ್ದು ನೇರ ನೇಮಕಾತಿ ಮೂಲಕ ಶೇ. 75 ಹುದ್ದೆಗಳನ್ನು ತುಂಬುವುದು ಮತ್ತು ಶೇ. 25ರಷ್ಟನ್ನು ಮುಂಭಡ್ತಿ ಮೂಲಕ ಭರ್ತಿಮಾಡಲು ಆದೇಶಿಸಲಾಗಿದೆ ಎಂದು ಸಚಿವ ಮಧುಬಂಗಾರಪ್ಪ ಉತ್ತರಿಸಿದರು.
ಉಪನ್ಯಾಸಕರಿಗಿಲ್ಲ ಆರೋಗ್ಯ ಸಂಜೀವಿನಿ:
ಎಸ್.ಎಲ್. ಭೊಜೇಗೌಡರ ಪ್ರಶ್ನೆಗೆ ಉತ್ತರಿಸಿದ ಸಚಿವ ಮಧು, ಅನುದಾನರಹಿತ ಕಾಲೇಜು ಉಪನ್ಯಾಸಕರಿಗೆ ವೇತನ ಬಹಳ ಕಡಿಮೆ ನೀಡುವುದರಿಂದ ಅನಾರೋಗ್ಯದ ಸಂದರ್ಭದಲ್ಲಿ ವೈದ್ಯಕೀಯ ವೆಚ್ಚ ಭರಿಸಲು ಸಾಧ್ಯವಾಗುತ್ತಿಲ್ಲ ಎಂಬ ಅಂಶ ಇನ್ನೂ ಸರಕಾರದ ಗಮನಕ್ಕೆ ಬಂದಿಲ್ಲ. ಹೀಗಾಗಿ ಸರಕಾರಿ ಪದವಿಪೂರ್ವ ಕಾಲೇಜುಗಳ ನೌಕರರಿಗೆ ಈಗಾಗಲೇ ನೀಡುತ್ತಿರುವ “ಆರೋಗ್ಯ ಸಂಜೀವಿನಿ’ ಸೌಲಭ್ಯವನ್ನಾಗಲಿ ಅಥವಾ ವೈದ್ಯಕೀಯ ವೆಚ್ಚ ಮರುಪಾವತಿ ಸೌಲಭ್ಯವನ್ನಾಗಲಿ ಅನುದಾನರಹಿತ ಉಪನ್ಯಾಸಕರಿಗೆ ವಿಸ್ತರಿಸುವ ಪ್ರಸ್ತಾವನೆ ಸದ್ಯಕ್ಕಿಲ್ಲ ಎಂದು ಸ್ಪಷ್ಟಪಡಿಸಿದರು.
ಇತರೆ ವಿಷಯಗಳು:
ಹಣ ಬರದಿರುವ ಫಲಾನುಭವಿಗಳು ತಪ್ಪದೇ ಈ ದಾಖಲೆ ಸಲ್ಲಿಸುವಂತೆ ಸರ್ಕಾರ ಸೂಚನೆ!
ಕೇಂದ್ರದಿಂದ ಬಜೆಟ್ ಧಮಾಕ ಆಫರ್.!! ನಿರ್ಮಲ ಸೀತಾರಾಮನ್‌ರವರ ಪ್ರಮುಖ ಘೋಷಣೆ ಇದು