ಹಲೋ ಸ್ನೇಹಿತರೆ, ರಾಜ್ಯಾದ್ಯಂತ ಬಸ್‌ಗಳಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನಿಂಗ್ ಮಾಡಿ ಟಿಕೆಟ್ ನೀಡುವ ‘ಸ್ಮಾರ್ಟ್ ಎಲೆಕ್ಟ್ರಾನಿಕ್ ಟಿಕೆಟಿಂಗ್ ಮಷೀನ್’ ವ್ಯವಸ್ಥೆ 150 ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಆರಂಭಗೊಳ್ಳಲಿದೆ. ಮಷೀನ್ ಗಳನ್ನು ಪರಿಶೀಲಿಸಿದ ಬಳಿಕ ಎಲ್ಲ ಬಸ್‌ಗಳ ನಿರ್ವಾಹಕರ ಕೈಗೆ ‘ಸ್ಮಾರ್ಟ್ ಎಲೆಕ್ಟ್ರಾನಿಕ್ ಟಿಕೆಟಿಂಗ್ ಮಷೀನ್’ ಬರಲಿದೆ.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಮತ್ತು BMTC ಯ ಕೆಲವು ಮಾರ್ಗಗಳಲ್ಲಿ UPI ತಂತ್ರಜ್ಞಾನದ ಮೂಲಕ ಟಿಕೆಟ್ ದರ ಪಾವತಿ ವ್ಯವಸ್ಥೆ ಜಾರಿಯಲ್ಲಿದ್ದರೂ ಅದು ಸ್ಮಾರ್ಟ್ ಎಲೆಕ್ಟ್ರಾನಿಕ್ ಟಿಕೆಟಿಂಗ್ ವ್ಯವಸ್ಥೆಯಲ್ಲ. ಕ್ಯೂಆರ್ ಕೋಡ್ ಮುದ್ರಣವನ್ನು ಕಂಡೆಕ್ಟರ್ ಕುತ್ತಿಗೆಗೆ ನೇತು ಹಾಕಿಕೊಂಡಿರುತ್ತಾರೆ.
ಸ್ಕ್ಯಾನ್ ಮಾಡಿ ಟಿಕೆಟ್ ದರ ಪಾವತಿಸಿದ ನಂತರ ಟಿಕೆಟ್ ನೀಡುತ್ತಾರೆ. ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಈ ಪದ್ಧತಿಯ ಬದಲು ಟಿಕೆಟ್ ಮಷೀನ್‌ನಲ್ಲೇ ಕ್ಯೂಆರ್ ಕೋಡ್ ಒದಗಿಸುವ ತಂತ್ರಜ್ಞಾನ ಇರಲಿದೆ. ‘ಕೆಎಸ್‌ಆರ್‌ಟಿಸಿಯಲ್ಲಿ ಒಟ್ಟು 83 ಘಟಕಗಳಿವೆ. ಇನ್ಮುಂದೆ ಬಸ್ ಗಳಲ್ಲಿ ಡಿಜಿಟಲ್ ಪೇಮೆಂಟ್ ಎನೇಬಲ್ (ಡಿಪಿಇ) ಇರುವ ಸ್ಮಾರ್ಟ್ ಇಟಿಎಂಗಳು ಬಳಕೆಯಾಗಲಿವೆ. ಫೋನ್ ಪೇ, ಗೂಗಲ್ ಪೇ ಸಹಿತ ಯುಪಿಐ ಆಧಾರಿತ ಪಾವತಿ ಸ್ವೀಕರಿಸಿದಾಗ ಆ ಮೊತ್ತವು ಸಂಬಂಧಪಟ್ಟ ಡಿಪೊ ಬ್ಯಾಂಕ್ ಖಾತೆಗೆ ಜಮೆ ಆಗಲಿದೆ’ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓದಿ: ಈ ದಿನ ಒಟ್ಟಿಗೆ 4,000 ರೂ. ಜಮಾ! ಗೃಹಲಕ್ಷ್ಮಿ ಹಣಕ್ಕಾಗಿ ಕಾಯುತ್ತಿರುವ ಹೊಸ ಅಪ್ಡೇಟ್
ನಗದುರಹಿತ ವ್ಯವಸ್ಥೆ
‘ಸ್ಮಾರ್ಟ್ ಎಲೆಕ್ಟ್ರಾನಿಕ್ ಟಿಕೆಟಿಂಗ್ ಮಷೀನ್ ವ್ಯವಸ್ಥೆ ಜಾರಿಗೊಳಿಸುವುದರಿಂದ ನಗದು ರಹಿತ ವ್ಯವಸ್ಥೆಗೆ ಒತ್ತು ನೀಡಲಾಗುತ್ತಿದೆ. ಯುಪಿಐ ಬಳಸುವುದು ಈಗ ಎಲ್ಲ ಕಡೆ ಸಾಮಾನ್ಯವಾಗಿರುವುದರಿಂದ ಜನರಿಗೆ ಈ ಪಾವತಿ ವ್ಯವಸ್ಥೆ ಹೊಸತಲ್ಲ ಇದು ಸುಲಭ ಮಾರ್ಗವಾಗಿದೆ. ಕೆಎಸ್‌ಆರ್‌ಟಿಸಿಯಲ್ಲಿಯೂ ಈ ವ್ಯವಸ್ಥೆ ಸರಿಯಾದ ರೀತಿಯಲ್ಲಿ ಜಾರಿಯಾದರೆ ಹೆಚ್ಚಿನ ಪ್ರಯಾಣಿಕರು ಯುಪಿಐ ಮೂಲಕವೇ ಪಾವತಿ ಮಾಡಲಿದ್ದಾರೆ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇತರೆ ವಿಷಯಗಳು:
ಆಗಸ್ಟ್ 1 ರಿಂದ ಗೂಗಲ್ ಮ್ಯಾಪ್ ಸೇರಿ ಆಗಲಿದೆ 5 ದೊಡ್ಡ ಬದಲಾವಣೆ!
6-8ನೇ ತರಗತಿ ವಿದ್ಯಾರ್ಥಿಗಳಿಗೆ ಬ್ಯಾಗ್ ಮುಕ್ತ ದಿನ! ಶಿಕ್ಷಣ ಇಲಾಖೆಯಿಂದ ಹೊಸ ಮಾರ್ಗಸೂಚಿ ಪ್ರಕಟ