ಹಲೋ ಸ್ನೇಹಿತರೇ, ಇಂದು ಉದ್ಯೋಗ ಅನ್ನೋದು ಪ್ರತಿಯೊಬ್ಬರಿಗೂ ಬಹಳ ಮುಖ್ಯವಾಗಲಿದೆ. ಉದ್ಯೋಗ ಇದ್ರೆ ಮಾತ್ರ ನೆಮ್ಮದಿಯ ಜೀವನವನ್ನು ನಡೆಸಬಹುದು. ಇಂದು ಎಷ್ಟು ಶಿಕ್ಷಣ ಪಡೆದ್ದರೂ ಸರಿಯಾದ ಆಸಕ್ತಿಯನ್ನು ಇದ್ದ ಉದ್ಯೋಗವನ್ನು ಸಿಗುತ್ತಿಲ್ಲ. ಹಾಗಾಗಿಯೇ ಹೆಚ್ಚಿನವರು ಸ್ವ ಉದ್ಯಮ ದತ್ತವಾದ ಆಕರ್ಷಿತರಾಗುತ್ತಿದ್ದಾರೆ. ಅದೇ ರೀತಿ ಸರ್ಕಾರ ಕೂಡ ನಿರುದ್ಯೋಗ ಯುವಕ ಯುವತಿಯರನ್ನು ಪ್ರೊತ್ಸಾಹಿಸುತ್ತಲೇ ಬಂದಿದೆ.
ಯುವನಿಧಿ ಯೋಜನೆ?
ಇಂದು ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಯ ಮೂಲಕ ನಿರುದ್ಯೋಗ ಯುವಕ ಯುವತಿಯರಿಗೆ ಯುವನಿಧಿ ಯೋಜನೆಯನ್ನು ಜಾರಿಗೆ ತಂದಿದ್ದು ಹೆಚ್ಚಿನ ಯುವಕ ಯುವತಿಯರು ಈ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡುತ್ತಿದ್ದಾರೆ. ವಿದ್ಯಾವಂತ ನಿರುದ್ಯೋಗಿಗಳಿಗೆ 2022-23ನೇ ಸಾಲಿನಲ್ಲಿ ಉತ್ತೀರ್ಣರಾಗಿ 6 ತಿಂಗಳು ಉದ್ಯೋಗ ಸಿಗದ ಯುವಕ ಯುವತಿಯರು ಅರ್ಹರಾಗಿದ್ದಾರೆ. ಪದವೀಧರರಿಗೆ 3,000 ರೂಪಾಯಿ ಮತ್ತು ಡಿಪ್ಲೊಮಾ ಪದವೀಧರರಿಗೆ ಮಾಸಿಕ 1,500 ರೂ ಆರ್ಥಿಕ ಸಹಾಯವನ್ನು ಸಹ ಸರ್ಕಾರ ನೀಡುತ್ತಿದೆ.
ಉಚಿತ ತರಭೇತಿ:
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್ ಸಹಯೋಗದಲ್ಲಿ ನಡೆಸುತ್ತಿರುವ ರುಡ್ ಸೆಟ್ ಸಂಸ್ಥೆಯು ನಿರುದ್ಯೋಗ ಯುವಕ ಯುವತಿಯರಿಗೆ ಹೊಸ ಅವಕಾಶ ವನ್ನು ನೀಡಿದ್ದು ವಿವಿಧ ರೀತಿಯ ಉಚಿತ ತರಬೇತಿಗೆ ಅರ್ಜಿಯನ್ನು ಆಹ್ವಾನ ಮಾಡಿದೆ. ಇದಕ್ಕೆ ಗ್ರಾಮೀಣ ಪ್ರದೇಶದ ನಿರುದ್ಯೋಗಿ ಯುವಕ ಯುವತಿಯರು ಅರ್ಜಿ ಹಾಕಬಹುದು.
ಪೋಷಕರೇ ಹುಷಾರ್.! ಒಂದನೇ ತರಗತಿಗೆ 6 ವರ್ಷ ಕಡ್ಡಾಯ
ಯಾವ ತರಭೇತಿ?
ಹೌದು ಕಂಪ್ಯೂಟರ್ ಡಿಟಿಪಿ ಮತ್ತು ಗ್ರಾಫಿಕ್ ಡಿಸೈನಿಂಗ್ ನ ಕಲಿಕೆಗೆ 45 ದಿನಗಳ ತರಬೇತಿಯನ್ನು ನೀಡಲಿದೆ. ತರಬೇತಿ ಮುಗಿದ ನಂತರ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಮೂಲಕ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಅರ್ಜಿ ಸಲ್ಲಿಕೆಗೆ ಜೂನ್ 15 ಕೊನೆಯ ದಿನವಾಗಗಿದ್ದು ಆಸಕ್ತರು ಅರ್ಜಿಯನ್ನು ಹಾಕಬಹುದಾಗಿದೆ ಹಾಗೂ ಅರ್ಜಿ ಸಲ್ಲಿಸಲು ಕೆಲವೊಂದು ಅರ್ಹತೆಗಳು ಇರಲಿದ್ದು 18 ರಿಂದ 45 ವರ್ಷ ವಯಸ್ಸಿನ ಯುವಕ ಯುವತಿಯರು ಅರ್ಜಿ ಹಾಕಬಹುದು. ಕನ್ನಡ ಭಾಷೆ ಆಂಗ್ಲ ಭಾಷೆಯನ್ನು ಓದಲು ಮತ್ತು ಬರೆಯಲು ಗೊತ್ತಿರಬೇಕು.
ದಾಖಲೆ ಏನು?
- ಆಧಾರ್ ಕಾರ್ಡ್ ನ್ನು ಹೊಂದಿರಬೇಕು
- ರೇಷನ್ ಕಾರ್ಡ್ ಇರಬೇಕು
- ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳು ಆಗಿರಬೇಕು. ಆಸಕ್ತರು ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ರುಡ್‌ಸೆಟ್ ಸಂಸ್ಥೆ, ಅರಿಶಿನಕುಂಟೆ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೊಬೈಲ್ ಸಂಖ್ಯೆ 9740982585, ಈ ನಂಬರ್ ಅನ್ನು ಸಂಪರ್ಕ ಮಾಡಬಹುದು.
ಇತರೆ ವಿಷಯಗಳು:
ರಾಜ್ಯದಲ್ಲಿ ಮತ್ತೆ 1 ವಾರಗಳ ಕಾಲ ಭಾರಿ ಮಳೆ, ಕರ್ನಾಟಕದ ಈ 5 ಜಿಲ್ಲೆಗಳಿಗೆ ಬಾರಿ ಮಳೆಯಾಗಲಿದೆ.
ಆಧಾರ್ ಬಳಕೆದಾರರೇ ಹುಷಾರ್.!! ಈ ದಾಖಲೆ ತಪ್ಪಾಗಿದ್ರೆ ಬೀಳುತ್ತೆ ಭಾರೀ ದಂಡ