ಹಲೋ ಸ್ನೇಹಿತರೇ, ಈಗಾಗಲೇ ಜಿಯೋ ಪಾಲಿಟಿಕ್ಸ್ ಮತ್ತು ಇನ್ನಿತರ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಜಾಗತಿಕ ಸಂಸ್ಥೆಯು ಆಗಿರುವಂತಹ ಫೆಡರಲ್ ಬ್ಯಾಂಕ್ ಸಹ ತನ್ನ ಬಡ್ಡಿ ದರದಲ್ಲಿ ಯಾವುದೇ ರೀತಿಯಲ್ಲಿ ಬದಲಾವಣೆಗಳನ್ನು ಜಾರಿಗೆ ತಂದಿಲ್ಲ. ಇದೇ ರೀತಿಯಲ್ಲಿ ಭಾರತದ ಕೇಂದ್ರೀಯ ಬ್ಯಾಂಕ್ ಆಗಿರುವಂತಹ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕೂಡ ಯಾವುದೇ ರೀತಿಯ ಬಡ್ಡಿ ದರದಲ್ಲಿ ಬದಲಾವಣೆಗಳನ್ನು ಸಾಲದ ಮೇಲೆ ಜಾರಿಗೆ ತಂದಿಲ್ಲ ಎಂಬುದಾಗಿ ತಿಳಿದುಬಂದಿದೆ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಫೆಬ್ರವರಿ 2023ರಲ್ಲಿ 6.5% ಕ್ಕೆ ನಿಗದಿಪಡಿಸಿತ್ತು ಹಾಗೂ ಇದುವರೆಗೂ ಕೂಡ ಇದರಲ್ಲಿ ಯಾವುದೇ ಬದಲಾವಣೆಗಳು ಕಂಡುಬಂದಿಲ್ಲ ಪ್ರತಿ ಬಾರಿ ಕೂಡ ಇದೇ ರೆಪೋ ರೇಟ್ ಅನ್ನು ಮುಂದುವರಿಸಿಕೊಂಡು ಹೋಗಲಾಗುತ್ತಿದೆ.
2024ರ ಮೊದಲ ನಾಲ್ಕು ತಿಂಗಳುಗಳ ಲೆಕ್ಕಾಚಾರ ಹಾಕಿದರೆ ಆಹಾರ ಹಾಗೂ ಪಾನೀಯಗಳ ಹಣದುಬ್ಬರ ಎನ್ನುವುದು 7.7% ಏರಿಕೆ ಕಂಡು ಬಂದಿದೆ ಎಂಬುದಾಗಿ ತಿಳಿದು ಬಂದಿದ್ದು ಇದು ಸ್ವಲ್ಪಮಟ್ಟಿಗೆ ಯೋಚನೆ ಮಾಡುವಂತಹ ವಿಚಾರವಾಗಿದೆ ಎಂದು ಹೇಳಬಹುದಾಗಿದೆ. ಇನ್ನು ಸಾಲಗಳ ಮೇಲೆ ಬಡ್ಡಿ ಏರಿಕೆ ಮಾಡದೆ ಇರುವ ನಿರ್ಧಾರದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಮೆರಿಕಾದ ಫೆಡರಲ್ ಬ್ಯಾಂಕ್ ಅನ್ನು ಅನುಸರಿಸುವುದು ಪಕ್ಕ ಆಗಿದೆ.
ಈಗಾಗಲೇ ಬ್ಯಾಂಕುಗಳಿಂದ ಸಾಲ ಪಡೆದುಕೊಂಡಿರುವವರು ಯಾವುದೇ ರೀತಿ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ ಯಾಕೆಂದರೆ ಸಾಲಗಳ ಮೇಲಿನ ರೆಪೋ ರೇಟ್ ಅನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕೇವಲ 6.5% ಕ್ಕೆ ಸ್ಥಗಿತಗೊಳಿಸಿದೆ.
ಬ್ಯಾಂಕ್ನಲ್ಲಿ ಲೋನ್ ಮಾಡಿದವರಿಗೆ ಹೊಸ ರೂಲ್ಸ್.!! ಯಾವುದು ಗೊತ್ತಾ ಈ ನಿಯಮ??
ಯಾವುದೇ ರೀತಿಯ ಹೆಚ್ಚಳವನ್ನು ಮಾಡಿಲ್ಲ ಎಂಬುದನ್ನು ನೀವು ಈ ಮೂಲಕ ತಿಳಿದುಕೊಳ್ಳ ಬಹುದಾಗಿದ್ದು ಹೀಗಾಗಿ ಭಾರತೀಯರಿಗೆ ಎಲೆಕ್ಷನ್ ರಿಸಲ್ಟ್ ನಂತರ ಈಗ ಈ ಮೂಲಕ ಮತ್ತೊಂದು ಗುಡ್ ನ್ಯೂಸ್ ಕೂಡ ಸಿಕ್ಕಿದೆ ಎಂದು ಹೇಳಬಹುದು.
ನಾಲ್ಕು ಪ್ರತಿಶತವಾದ ಹಣದುಬ್ಬರದ ಪ್ರಮಾಣವನ್ನು ಸಾಧಿಸುವುದಕ್ಕಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಪ್ರಯೋಜನಪಡುತ್ತಿದೆ ಎಂದು ಹೇಳಬಹುದಾಗಿದೆ. ಇನ್ನು ಈ ಸಂದರ್ಭದಲ್ಲಿ ಹೊಸದಾದ ಭಾರತದ ಸರ್ಕಾರವು ಮುಂದಿನ ತಿಂಗಳು ಮಂಡಿಸಲಿರುವಂತಹ ಬಜೆಟ್ ನಲ್ಲಿ ಈ ವಿಚಾರಗಳನ್ನು ತಲೆಯಲ್ಲಿ ಇಟ್ಕೊಂಡು ಬಜೆಟ್ ಮಂಡನೆ ಮಾಡೋದು ಸಾಕಷ್ಟು ಪ್ರಮುಖವಾಗಿದೆ ಎನ್ನುವುದನ್ನು ಕೂಡ ತಿಳಿದುಕೊಳ್ಳಬೇಕಾಗಿದೆ. ಇಗೀನ ಮಟ್ಟಿಗೆ NDA ನೇತೃತ್ವದ ಸರ್ಕಾರವು ಮತ್ತೆ ಅಧಿಕಾರಕ್ಕೆ ಬಂದಿರುವ ಬೆನ್ನಲ್ಲಿ ಭಾರತೀಯರಿಗೂ ಸಹ ತಾವು ಬ್ಯಾಂಕಿನಲ್ಲಿ ಪಡೆದುಕೊಂಡಿರುವಂತಹ ಲೋನ್ ಗಳ ಮೇಲೆ ಯಾವುದೇ ರೀತಿಯ ಬಡ್ಡಿ ಹೆಚ್ಚಳ ಆಗಿಲ್ಲ ಅನ್ನುವಂತಹ ಗುಡ್ ನ್ಯೂಸ್ ಸಿಕ್ಕಿದೆ ಎಂದು ಹೇಳಬಹುದಾಗಿದೆ.
ಇತರೆ ವಿಷಯಗಳು:
ಇನ್ಮುಂದೆ ಸಿಗಲ್ವಾ ಗ್ಯಾರೆಂಟಿ ಯೋಜನೆಗಳ ಹಣ? ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ
ಮಹಿಳೆಯರಿಗೆ ಸರ್ಕಾರದಿಂದ ಸಿಹಿ ಸುದ್ದಿ.!! ಆಧಾರ್ ಇದ್ದವರ ಮನೆ ಸೇರಲಿದೆ ಉಚಿತ ಹೊಲಿಗೆ ಯಂತ್ರ