ಹಲೋ ಸ್ನೇಹಿತರೇ, ರಾಜ್ಯದ ಮಹಿಳೆಯರು ಆರ್ಥಿಕವಾಗಿ ಸಬಲರಾಗಿರಬೇಕು ಎಂದು ಸರ್ಕಾರವು ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯ ಮೂಲಕ ಪ್ರತಿ ತಿಂಗಳು ಸಹ ಮಹಿಳೆಯರ ಖಾತೆಗೆ ₹2000 ರೂಪಾಯಿಗಳನ್ನು ಜಮೆ ಮಾಡಲಾಗುತ್ತಿದೆ.
ಆದ್ರೆ ಇದೀಗ ಗೃಹಲಕ್ಷ್ಮಿ ಯೋಜನೆಯ ₹2000 ರೂಪಾಯಿಯ ಜೊತೆಗೆ ಮತ್ತೊಂದು ಯೋಜನೆಯ ಮೂಲಕವೇ ಮಹಿಳೆಯರಿಗೆ ₹1200 ರೂಪಾಯಿ ಸಿಗಲಿದೆ. ಆರ್ಥಿಕವಾಗಿ ಕಷ್ಟದಲ್ಲಿರುವ ವೃದ್ಧರಾದ ಮಹಿಳೆಯರು ಹಾಗೂ ಪುರುಷರು ಇಬ್ಬರಿಗೂ ಈ ಹಣ ಸಿಗಲಿದೆ..
ಸಂಧ್ಯಾ ಸುರಕ್ಷಾ ಯೋಜನೆ
ನಮ್ಮ ದೇಶದ ಹಿರಿಯ ಜೀವಿಗಳಿಗೆ ಸಹಾಯ ಆಗಲಿ ಎಂದು ಸಂಧ್ಯಾ ಸುರಕ್ಷಾ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಇದು 2007ರಲ್ಲಿ ಶುರುವಾದ ಯೋಜನೆ ಆಗಿದೆ. ಈ ಯೋಜನೆಯ ಮೂಲಕ ವೃದ್ಧರಿಗೆ ಆರ್ಥಿಕವಾಗಿ ಸಹಾಯವನ್ನು ಮಾಡುವ ಉದ್ದೇಶವನ್ನು ಹೊಂದಿದೆ ಸರ್ಕಾರ. ವೃದ್ಧರಿಗೆ ಪ್ರತಿ ತಿಂಗಳು ಪೆನ್ಶನ್ ರೂಪದಲ್ಲಿ ಹಣವು ಇನ್ಮುಂದೆ ಸಿಗಲಿದೆ. ಬಡತನದಲ್ಲಿರುವ ಹಲವು ಜನರಿಗೆ ಈ ಸೌಲಭ್ಯ ಸಿಗುತ್ತಿದೆ.
ಏನೆಲ್ಲಾ ಸೌಲಭ್ಯ ಸಿಗಲಿದೆ?
ಸಂಧ್ಯಾ ಸುರಕ್ಷಾ ಯೋಜನೆಯಲ್ಲಿ ಯಾವೆಲ್ಲಾ ಸೌಲಭ್ಯಗಳು ಸಿಗುತ್ತದೆ ಎಂದು ನೋಡುವುದಾದ್ರೆ, ವೃದ್ಧರಿಗೆ ಪ್ರತಿ ತಿಂಗಳು ಕೂಡ ₹1200 ರೂಪಾಯಿ ಪೆನ್ಶನ್ ಸಿಗುತ್ತದೆ. ಜೊತೆಗೆ ನಿಮಗೆ ವೈದ್ಯಕೀಯ ಸೇವೆ, ಬಸ್ ಟಿಕೆಟ್ ದರದಲ್ಲಿ ರಿಯಾಯಿತಿ ಇದೆಲ್ಲವನ್ನು ಕೂಡ ಹಿರಿಯ ನಾಗರೀಕರು ಪಡೆದುಕೊಳ್ಳಬಹುದು. 65 ವರ್ಷ ಮೇಲ್ಪಟ್ಟವರು ಈ ಯೋಜನೆಯ ಸೌಲಭ್ಯವನ್ನು ಪಡೆಯಲು ಅರ್ಹರಾಗುತ್ತಾರೆ. ರೈತರು ಮತ್ತು ಕಾರ್ಮಿಕರು ಹಾಗೂ ಇನ್ನಿತರ ಸಣ್ಣ ಕೆಲಸ ಮಾಡುವ ಬಡವರು ಈ ಯೋಜನೆಗೆ ಅರ್ಹರಾಗುತ್ತಾರೆ.
ಪ್ರಧಾನಿಯಿಂದ ಬಡವರಿಗೆ ಬಂಪರ್ ಕೊಡುಗೆ!
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು
*ರೇಷನ್ ಕಾರ್ಡ್
*ಇನ್ಕಮ್ ಸರ್ಟಿಫಿಕೇಟ್
*ಏಜ್ ಪ್ರೂಫ್
*ವಾಸಸ್ಥಳ ದೃಢೀಕರಣ ಪತ್ರ
*ಎಲೆಕ್ಷನ್ ವೋಟರ್ ಐಡಿ
*ಬ್ಯಾಂಕ್ ಪಾಸ್ ಬುಕ್
ಅರ್ಜಿ ಸಲ್ಲಿಸಲು ಅರ್ಹತೆ
ಅರ್ಜಿ ಹಾಕುವ ವ್ಯಕ್ತಿ ನಮ್ಮ ರಾಜ್ಯದವರಾಗಿದ್ದು ಅವರ ವಯಸ್ಸು 65 ವರ್ಷ ತುಂಬಿರಬೇಕು. ಹಾಗೆಯೇ ಗಂಡ ಹೆಂಡತಿಯ ವಾರ್ಷಕ ಆದಾಯ 20 ಸಾವಿರಕ್ಕಿಂತ ಕಡಿಮೆ ಇರಬೇಕು. ಇವರು ಬೇರೆ ಯಾವುದೇ ಸರ್ಕಾರದ ಯೋಜನೆ ಇಂದ ಅಥವಾ ಖಾಸಗಿ ಸಂಸ್ಥೆಗಳಿಂದ ಪೆನ್ಶನ್ ಪಡೆಯುತ್ತಿರಬಾರದು. ಇದಲ್ಲವೂ ಅರ್ಹತೆಯ ಮಾನದಂಡ ಆಗಿದ್ದು, ವೃದ್ಧರು ಇದೆಲ್ಲವನ್ನು ನೋಡಿಕೊಂಡು ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸುವುದು ಎಲ್ಲಿ?
ಈ ಯೋಜನೆಗೆ ಹಿರಿಯರು ಆಫ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು. ನಿಮ್ಮ ಹತ್ತಿರದ ಬೆಂಗಳೂರು ಒನ್, ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬೇಕು. ಸಂಧ್ಯಾ ಸುರಕ್ಷಾ ಯೋಜನೆಗೆ ಅರ್ಜಿ ಸಲ್ಲಿಸಲು ಸಹಾಯ ಆಗಲಿ ಎಂದು ಸಹಾಯವಾಣಿಗಳನ್ನು ಸಹ ತೆರೆಯಲಾಗಿದ್ದು, ಅವುಗಳ ಸಹಾಯವನ್ನು ಪಡೆಯಬಹುದು. ನಿಮ್ಮ ಹತ್ತಿರದ ಗ್ರಾಮ ಪಂಚಾಯಿತಿ ಅಥವಾ ಪುರಸಭೆಯಲ್ಲಿ ಕೂಡ ಅರ್ಜಿ ಸಲ್ಲಿಸಬಹುದು.
ಇತರೆ ವಿಷಯಗಳು:
ಮನೆ ಇಲ್ಲದವರಿಗೆ ಮನೆ ಭಾಗ್ಯ.!! ಕೇಂದ್ರದ ಈ ಯೋಜನೆಗೆ ಅರ್ಜಿ ಸಲ್ಲಿಸಿದವರಿಗೆ ಮಾತ್ರ
ಕೆಎಸ್‌ಆರ್‌ಟಿಸಿ ಬಸ್ ಹೊಸ ನಿರ್ಧಾರ.!!! ಸರ್ಕಾರದಿಂದ ಬಂತು ಖಡಕ್ ವಾರ್ನಿಂಗ್