ಕೋಟ್ಯಂತರ ಬ್ಯಾಂಕ್ ಗ್ರಾಹಕರಿಗೆ ಗುಡ್ ನ್ಯೂಸ್: ಇಂದಿನಿಂದ ಹೊಸ ಬಡ್ಡಿದರ ಜಾರಿ!

ಹಲೋ ಸ್ನೇಹಿತರೇ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ  ಸ್ಥಿರ ಠೇವಣಿ ಬಡ್ಡಿ ದರದಲ್ಲಿ ಮತ್ತೊಮ್ಮೆ ಹೆಚ್ಚಳವನ್ನು ಘೋಷಿಸಲಾಗಿದೆ. ಈ ದರಗಳು ಇಂದಿನಿಂದಲೇ ಜಾರಿಯಾಗಲಿವೆ. SBI ಈ ನಿರ್ಧಾರ ಯಾರಿಗೆ ಹೆಚ್ಚು ಲಾಭದಾಯಕವಾಗಿದೆ ಗೊತ್ತೇ ತಿಳಿಯಲು ನಮ್ಮ ಲೇಖನವನ್ನು ಓದಿ. 

SBI FD Rate

SBI FD Rate: ತನ್ನ ಕೋಟ್ಯಾಂತರ ಬ್ಯಾಂಕ್ ಗ್ರಾಹಕರಿಗೆ SBI ಶುಭ ಸುದ್ದಿ ನೀಡಿದೆ. SBI ಮತ್ತೊಮ್ಮೆ FD ಬಡ್ಡಿದರದಲ್ಲಿ ಹೆಚ್ಚಳವನ್ನು ಘೋಷಿಸಿದೆ, 75 ಬೇಸಿಸ್ ಪಾಯಿಂಟ್‌ಗಳವರೆಗೂ ಬಡ್ಡಿದರವನ್ನು ಹೆಚ್ಚಿಸಲಾಗಿದೆ. ಹೊಸ ಬಡ್ಡಿದರ ಇಂದಿನಿಂದ (ಮೇ 15, 2024) ಜಾರಿಗೆ ಬರಲಿದೆ.

SBI 2 ಕೋಟಿಗಿಂತ ಕಡಿಮೆ FD ಮೇಲಿನ ಬಡ್ಡಿದರವನ್ನು ಹೆಚ್ಚಿಸಿದೆ. 3 ಅವಧಿಗಳಲ್ಲಿ ದರವನ್ನು ಹೆಚ್ಚಿಗೆ ಮಾಡಲಾಗಿದೆ. ಇವು 46 ದಿನಗಳಿಂದ 179 ದಿನಗಳು, 180 ದಿನಗಳಿಂದ 210 ದಿನಗಳು & 211 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ.  ಬ್ಯಾಂಕಿನ ವೆಬ್‌ಸೈಟ್ ಪ್ರಕಾರ, ಹೊಸ FD ದರಗಳು ಇಂದು ಮೇ 15, 2024 ರಿಂದ ಜಾರಿಗೆ ಬರಲಿದೆ.

SBI 46 ರಿಂದ 179 ದಿನಗಳು, 180 ರಿಂದ 210 ದಿನಗಳು & 211 ರಿಂದ ಒಂದು ವರ್ಷದ ಅವಧಿಗಿಂತ ಕಡಿಮೆ ಅವಧಿಯ  ನಿಶ್ಚಿತ ಠೇವಣಿಗಳ ಬಡ್ಡಿದರಗಳನ್ನು 25-75 ಬೇಸಿಸ್ ಪಾಯಿಂಟ್‌ಗಳಿಂದ (BPS) ಹೆಚ್ಚಿಸಿದೆ. ಗಮನಾರ್ಹವಾಗಿ, ಸಾರ್ವಜನಿಕ ವಲಯದ ಬ್ಯಾಂಕ್ ಡಿಸೆಂಬರ್ 27, 2023 ರಂದು FD ಮೇಲಿನ ಬಡ್ಡಿದರಗಳನ್ನು ಕೊನೆಯದಾಗಿ ಹೆಚ್ಚಿಸಲಾಗಿತ್ತು.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ  ಠೇವಣಿ ಅವಧಿಯ ಆಧಾರದ ಮೇಲೆ ಬಡ್ಡಿ ದರ

* 7 ದಿನಗಳಿಂದ 45 ದಿನಗಳವರೆಗಿನ ಅಲ್ಪಾವಧಿಯ ಠೇವಣಿಗಳಿಗೆ ಬಡ್ಡಿ ದರವು 3.50% ಆಗಿದೆ. 
* 46 ದಿನ & 179 ದಿನಗಳ ನಡುವಿನ ಠೇವಣಿಗಳಿಗೆ ಬಡ್ಡಿ ದರವು  5.50% ಏರಿಕೆಯಾಗಿದೆ. 
* 180 ದಿನಗಳಿಂದ 210 ದಿನಗಳವರೆಗಿನ ಠೇವಣಿಗಳಿಗೆ ಬಡ್ಡಿ ದರ 6.00% ಆಗಿದೆ. 
*  211 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿಗಳಿಗೆ 6.25% ಬಡ್ಡಿ ನೀಡಲಾಗುತ್ತಿದೆ. 
* 1 ವರ್ಷದಿಂದ 2 ವರ್ಷಗಳಿಗಿಂತ ಕಡಿಮೆ ಅವಧಿಗೆ, ಬಡ್ಡಿ ದರ 6.80% ರಷ್ಟಿದೆ. 
* 2 ವರ್ಷಕ್ಕಿಂತ ಹೆಚ್ಚು & 3 ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿಗಳಿಗೆ ಬಡ್ಡಿ ದರ 7.00% ರಷ್ಟಿದೆ.
* 3 ವರ್ಷದಿಂದ 5 ವರ್ಷಕ್ಕಿಂತ ಕಡಿಮೆ ಅವಧಿಯವರೆಗೆ, ಬಡ್ಡಿ ದರ 6.75% ಇದೆ. 
* ದೀರ್ಘಾವಧಿಯ ಠೇವಣಿಗಳಿಗೆ 5 ವರ್ಷಗಳಿಂದ 10 ವರ್ಷಗಳವರೆಗೆ, ಬಡ್ಡಿ ದರ 6.50% ಆಗಿದೆ.

State Bank Of India ಹಿರಿಯ ನಾಗರಿಕರು ತಮ್ಮ ಸ್ಥಿರ ಠೇವಣಿಗಳ ಮೇಲೆ ಹೆಚ್ಚುವರಿ 50 ಮೂಲ ಅಂಕಗಳನ್ನು ಪಡೆಯುತ್ತಾರೆ. SBI ಹಿರಿಯ ನಾಗರಿಕರಿಗೆ 7 ದಿನಗಳಿಂದ 10 ವರ್ಷಗಳ ನಡುವಿನ ಠೇವಣಿ ಅವಧಿಗಳಿಗೆ 4% ರಿಂದ 7.5% ವರೆಗೆ ಬಡ್ಡಿದರ ನೀಡುತ್ತದೆ.

ಇತ್ತೀಚಿನ ದರ ಹೆಚ್ಚಳದ ನಂತರ, ಎಸ್‌ಬಿಐ ಹಿರಿಯ ನಾಗರಿಕರಿಗೆ ಬಡ್ಡಿದರ ಈ ಕೆಳಕಂಡಂತಿದೆ:- 

  • 7 ದಿನಗಳಿಂದ 45 ದಿನಗಳಿಗೆ 4%
  • 46 ದಿನಗಳಿಂದ 179 ದಿನಗಳಿಗೆ 6% 
  • 180 ದಿನಗಳಿಂದ 210 ದಿನಗಳಿಗೆ 6.50%
  • 211 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ ಸಮಯಕ್ಕೆ 6.75%
  • 1 ವರ್ಷದಿಂದ 2 ವರ್ಷಕ್ಕಿಂತ ಕಡಿಮೆ 7.30%
  • 2 ವರ್ಷದಿಂದ 3 ವರ್ಷಕ್ಕಿಂತ ಕಡಿಮೆ 7.50%
  • 3 ವರ್ಷದಿಂದ 5 ವರ್ಷಕ್ಕಿಂತ ಕಡಿಮೆ 7.25% 
  • 5 ವರ್ಷಗಳು & 10 ವರ್ಷಗಳವರೆಗೆ 7.50%

ಇತರೆ ವಿಷಯಗಳು

ರಾಜ್ಯದಲ್ಲಿ ಇನ್ನೂ 3 ದಿನ ಭರ್ಜರಿ ಮಳೆಯಾಗಲಿದೆ, ಎಲ್ಲೆಲ್ಲಿ ಮಳೆಯಾಗಲಿದೆ ಎಂಬ ಮಾಹಿತಿ ಇಲ್ಲಿದೆ.

ಕರ್ನಾಟಕ ಗಂಗಾ ಕಲ್ಯಾಣ ಯೋಜನೆ 2024, ಉಚಿತ ಬೋರ್ವೆಲ್ ಗೆ ಅರ್ಜಿ ಸಲ್ಲಿಕೆ ಪ್ರಾರಂಭ.

Leave a Reply

Your email address will not be published. Required fields are marked *