ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ಗುಡ್‌ನ್ಯೂಸ್‌! 80 ಕೋಟಿ ರೂ.ವೆಚ್ಚದಲ್ಲಿ ವಿದ್ಯಾರ್ಥಿವೇತನ ಘೋಷಣೆ

ಹಲೋ ಸ್ನೇಹಿತರೆ, ರಾಜ್ಯ ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದು, 1 ರಿಂದ 8ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 80 ಕೋಟಿ ರೂ.ವೆಚ್ಚದಲ್ಲಿ ವಿದ್ಯಾರ್ಥಿವೇತನವನ್ನು ಘೋಷಣೆ ಮಾಡಲಾಗಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಲು ಈ ಲೇಖನವನ್ನು ಕೊನೆವರೆಗೂ ಓದಿ.

Scholarship for Minorities

2023-24ನೇ ಸಾಲಿನಲ್ಲಿ ಅಲ್ಪಸಂಖ್ಯಾತರ 62 ವಸತಿ ಶಾಲೆಗಳನ್ನು ಪಿಯು ಕಾಲೇಜುಗಳನ್ನಾಗಿ ಉನ್ನತೀಕರಿಸಿ 50 ಮೊರಾರ್ಜಿದೇಸಾಯಿ ವಸತಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯಾಬಲವನ್ನು ದ್ವಿಗುಣಗೊಳಿಸಲಾಗಿದ್ದೂ, ಇದರಿಂದಾಗಿ 3,387 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಅಲ್ಪಸಂಖ್ಯಾತ 4,03,877 ವಿದ್ಯಾರ್ಥಿಗಳಿಗೆ ಒಟ್ಟು ರೂ.58.95 ಕೋಟಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನವನ್ನು ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನವನ್ನು 77,330 ವಿದ್ಯಾರ್ಥಿಗಳಿಗೆ ರೂ.70.20 ಕೋಟಿ ಪಾವತಿಸಲಾಗಿದೆ 500 ಕೋಟಿ ರೂ.ಗಳ ವೆಚ್ಚದಲ್ಲಿ 35 ಕನ್ನಡ ಹಾಗೂ ಇಂಗ್ಲೀಷ್ ಭಾಷಾ ಪ್ರಯೋಗಾಲಯಗಳನ್ನು ಈಗಾಗಲೇ ತೆರೆಯಲಾಗಿದೆ ಎಂದರು.

ಇದನ್ನು ಓದಿ: ರಾಜ್ಯದಲ್ಲಿ ಮಳೆಗೆ ಅವಾಂತರ! ಖಾಸಗಿ ಬಸ್‌ ಟಿಕೆಟ್‌ ಬೆಲೆಯಲ್ಲಿ ಭಾರೀ ಏರಿಕೆ

ವಿದೇಶಿ ವಿದ್ಯಾರ್ಥಿವೇತನದ ಯೋಜನೆಯಡಿಯಲ್ಲಿ ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವ 304 ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಒಟ್ಟು ರೂ.28.11 ಕೋಟಿ ವಿದ್ಯಾರ್ಥಿವೇತನವನ್ನು ಪಾವತಿಸಲಾಗಿದೆ. ಎಂ.ಫಿಲ್ ಮತ್ತು ಪಿ.ಹೆಚ್.ಡಿ 241 ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಯೋಜನೆಯಡಿ ರೂ.425 ಕೋಟಿಗಳನ್ನು ಹಾಗೂ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲು ಈ ಯೋಜನೆಯಡಿ 8,854 ವಿದ್ಯಾರ್ಥಿಗಳಿಗೆ ರೂ.4.25 ಕೋಟಿಗಳನ್ನು ವೆಚ್ಚ ಮಾಡಲಾಗಿದೆ ಎಂದರು.

2023-24ನೇ ಸಾಲಿಗೆ ವಿದ್ಯಾಸಿರಿ ಯೋಜನೆಯಡಿ ರೂ.10.31 ಕೋಟಿಗಳನ್ನು ವೆಚ್ಚ ಮಾಡಲಾಗಿದ್ದು ಇದರಡಿ 6,963 ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದಿದ್ದಾರೆ. ಹಾಗೆಯೇ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಉತ್ತೇಜನ ಯೋಜನೆಯಡಿ ರೂ.6.04 ಕೋಟಿಗಳನ್ನು ವೆಚ್ಚ ಮಾಡಲಾಗಿದ್ದು, 2,418 ಬಿ.ಎಡ್ ಮತ್ತು ಡಿ.ಎಡ್ ಹಾಗೂ ಐಐಟಿ, ಐಐಎಂ ವಿದ್ಯಾರ್ಥಿಗಳು ಈ ಯೋಜನೆಯಡಿ ಪ್ರಯೋಜನ ಪಡೆದಿದ್ದಾರೆ.

ಈಗಾಗಲೇ ಶಿಕ್ಷಣ ಇಲಾಖೆ ವತಿಯಿಂದ ಕಾರ್ಯನಿರ್ವಹಿಸುತ್ತಿರುವ ವಸತಿ ಕಾಲೇಜುಗಳಲ್ಲಿ, ಜೀವಶಾಸ್ತ್ರ, ಭೌತಶಾಸ್ತ್ರ, ಮತ್ತು ರಸಾಯನಶಾಸ್ತ್ರ ವಿಷಯಗಳಿಗೆ ತಲಾ 110 ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದ್ದು, ಎಲ್ಲಾ ವಸತಿ ಶಾಲೆಗಳಲ್ಲಿ ಮಂಚಗಳು, ಹಾಸಿಗೆಗಳು, ಡೆಸ್ಕ್ಗಳು, ಇತರೆ ಮೂಲಭೂತ ಮೂಲಸೌಕರ್ಯಗಳನ್ನು ಒದಗಿಸಲಾಗಿದೆ.

ಹೆಚ್ಚು ಅಂಕ ಗಳಿಸಿದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ 10 ಸಾವಿರ ರೂ.ಗಳ ನಗದು ಬಹುಮಾನ, ಅಭಿನಂದನಾ ಪ್ರಶಸ್ತಿ ಫಲಕ, ಪದಕ, ಹಾಗೇ ಪಿಯು ವಿದ್ಯಾರ್ಥಿಗಳಿಗೆ 15 ಸಾವಿರ ರೂ.ಗಳ ನಗದು ಬಹುಮಾನ, ಅಭಿನಂದನಾ ಪ್ರಶಸ್ತಿ ಫಲಕ, ಪದಕ ಹಾಗೂ ಸಚಿವರಿಂದ ತಮ್ಮ ವೈಯಕ್ತಿಕವಾಗಿ ಈ ಎಲ್ಲಾ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ವಾಚ್ ನೀಡಿ ಸನ್ಮಾನ ಮಾಡಿದರು.

ಇತರೆ ವಿಷಯಗಳು:

ಇಂದಿನಿಂದ 12 ಲಕ್ಷ ಪಡಿತರ ಚೀಟಿಗಳು ಬ್ಲಾಕ್!‌ ನಿಮ್ಮ ಹೆಸರು ಚೆಕ್‌ ಮಾಡಿ?

ಈ ದಿನ ಒಟ್ಟಿಗೆ 4,000 ರೂ. ಜಮಾ!‌ ಗೃಹಲಕ್ಷ್ಮಿ ಹಣಕ್ಕಾಗಿ ಕಾಯುತ್ತಿರುವ ಹೊಸ ಅಪ್ಡೇಟ್

Leave a Reply

Your email address will not be published. Required fields are marked *