ಕುರಿ/ಆಡು ಸಾಕಾಣಿಕೆ ಸರ್ಕಾರದಿಂದ ಹಣ.! ಈ ಲಿಂಕ್‌ನಲ್ಲಿ ಅರ್ಜಿ ಹಾಕಿ ಸಿಗುತ್ತೆ 1,75,000

ಹಲೋ ಸ್ನೇಹಿತರೇ, ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯಡಿ ಕುರಿ & ಉಣ್ಣೆ ಉತ್ಪಾದಕರ ಸಹಕಾರ ಸಂಘಗಳಲ್ಲಿನ ಅರ್ಹ 20,000 ಕುರಿಗಾಹಿ ಸದಸ್ಯರಿಗೆ 20+1 ಕುರಿ / ಮೇಕೆ ಘಟಕಗಳನ್ನು ರೂ.1,75,000/- ಗಳ ವೆಚ್ಚದಲ್ಲಿ ಒದಗಿಸುವುದರ ಮೂಲಕ ಆರ್ಥಿಕವಾಗಿ ರಾಜ್ಯದಲ್ಲಿನ ಕುರಿಗಾಹಿಗಳನ್ನು ಸದೃಢಗೊಳಿಸುವುದು & ರಾಜ್ಯದಲ್ಲಿ ಸಮಗ್ರವಾಗಿ ಕುರಿ / ಮೇಕೆ ಅಭಿವೃದ್ಧಿಗೊಳಿಸುವ ಯೋಜನೆಯಾಗಿದೆ. ಇದರಲ್ಲಿ ಹಣ ಪಡೆಯುವುದು ಹೇಗೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

sheep and goat farming karnataka

ಸದರಿ ಯೋಜನೆಯನ್ನು ಕರ್ನಾಟಕ ಕುರಿ & ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ ಹಾಗೂ ಕರ್ನಾಟಕ ಸಹಕಾರ ಕುರಿ & ಮೇಕೆಗಳ ಸಾಕಾಣಿಕೆದಾರರ ಸಂಘಗಳ ಮಹಾ ಮಂಡಳ ರವರುಗಳ ಸಹಯೋಗದೊಂದಿಗೆ ಅನುಷ್ಠಾನಗೊಳಿಸುವುದು.

ಅದೇ ರೀತಿ ಮುಖ್ಯವಾಗಿ ಹೇಳಬೇಕೆಂದರೆ ಸ್ವಲ್ಪ ಪ್ರಮಾಣದ ಕೃಷಿಯ ತರ ಚಟುವಟಿಕೆಗಳಲ್ಲಿ ಲಾಭ ತುಂಬಾ ಇರುತ್ತದೆ ಅದನ್ನು ರೈತರು ಯಾವ ರೀತಿಯಾಗಿ ಮಾಡಿಕೊಂಡು ಹೋಗುತ್ತಾರೆ & ತಮ್ಮ ಜಮೀನಿನ ಜೊತೆಗೆ ಅದೊಂದು ಖುಷಿಯನ್ನು ಮಾಡಿದರೆ ಸಾಕು ಕೈ ತುಂಬಾ ದಿನನಿತ್ಯ ಆದಾಯ ಬರುವಂತಹ / ವಾರಕ್ಕೊಮ್ಮೆ ಕೈ ತುಂಬಾ ಹಣ ಬರುವಂತಹ ಕೆಲವೊಂದು ಕೃಷಿ ಉದ್ಯಮಗಳಿವೆ ಅವುಗಳನ್ನು ಸಹ ನೀವು ಪ್ರಾರಂಭಿಸಿಕೊಂಡು ನಿಮ್ಮ ಆದಾಯದ ಜೊತೆಗೆ ಅದು ಕೂಡ ಆದಾಯ ಮಾಡಿಕೊಂಡು ಒಟ್ಟಾರೆ ನಿಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಲು ಸುಲಭವಾದ ದಾರಿಗಳಿವೆ.

ರಾಜ್ಯದಲ್ಲಿ ಅಮೃತ ಸ್ವಾಭಿಮಾನ ಕುರಿಗಾಹಿ ಯೋಜನೆ?

ಈ ಯೋಜನೆ ತುಂಬಾ ಫೇಮಸ್ ಯೋಜನೆಯಾಗಿದ್ದು ಕಳೆದ ವರ್ಷದಂತೆ ಈ ವರ್ಷವೂ ಕೂಡ 2024ನೇ ಸಾಲಿನ ಅಮೃತ ಸ್ವಾಭಿಮಾನ ಕುರಿಗಾಗಿ ಯೋಜನೆಗೆ ಅರ್ಜಿಯನ್ನು ಕರೆಯಲಾಗಿದೆ ಅರ್ಹರು ಅರ್ಜಿಯನ್ನು ಸಲ್ಲಿಸಬಹುದು, ಮೊಟ್ಟಮೊದಲಿಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ರಾಜ್ಯ ಉಣ್ಣೆ ಅಭಿವೃದ್ಧಿ ನಿಗಮಕ್ಕೆ ನೀವು ಭೇಟಿ ನೀಡಬೇಕು & ಸದಸ್ಯತ್ವವನ್ನು ಪಡೆದಿರಬೇಕು ಯಾರು ಸದಸ್ಯರು ಇರುತ್ತಾರೆ ಪ್ರತಿ ಸದಸ್ಯರಿಗೂ ಈ ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ.

ಸಿಮ್ ಕಾರ್ಡ್ ಇಲ್ಲದೆಯೂ ವೇಗದ ಇಂಟರ್ನೆಟ್ ಇಲ್ಲಿಂದ ಪಡೆಯಿರಿ..!

ಯಾವ ಸಂಸ್ಥೆಯಿಂದ ಎಷ್ಟು ಹಣ?

  • NCDC ವತಿಯಿಂದ 5೦% ಸಬ್ಸಿಡಿಯಲ್ಲಿ 87500 ರೂ ದೊರೆಯುತ್ತದೆ.
  • ರಾಜ್ಯ ಸರ್ಕಾರದ ಕಡೆಯಿಂದ 25% ಸಬ್ಸಿಡಿಯಲ್ಲಿ 43570 ರೂ ದೊರೆಯುತ್ತದೆ.
  • ಬ್ಯಾಂಕ್ ಸಾಲ 25% ಸಬ್ಸಿಡಿಯಲ್ಲಿ 43570 ರೂ ದೊರೆಯುತ್ತದೆ.
  • ಈ ಯೋಜನೆಯ ಲಾಭ ಪಡೆಯಲು ಇರಬೇಕಾದ ಅರ್ಹತೆಗಳು –
  • ರಾಜ್ಯದ ನಿವಾಸಿಯಾಗಿರಬೇಕು.
  • ಕರ್ನಾಟಕ ಸರ್ಕಾರದ ಸಹಕಾರ ಇಲಾಖೆಯಲ್ಲಿ ನೋಂದಣಿ ಯಾಗಿರಬೇಕು.
  • ಸಂಘವು, ತನ್ನ ಸಭೆಗಳನ್ನು ನಿರಂತರವಾಗಿ ನಡೆಸಿರಬೇಕು. ವಾರ್ಷಿಕ ಸಾಮಾನ್ಯ ಸಭೆ (AGM) ಹಾಗೂ ಚುನಾವಣಾ ಬೈಲಾ ಮತ್ತು ಕಾಯ್ದೆಗನುಗುಣವಾಗಿ ನಡೆಸಿರತಕ್ಕದ್ದು. ಸಂಘದ ಇತ್ತೀಚಿನ 3 ವರ್ಷಗಳ ಲೆಕ್ಕ ಪರಿಶೋಧನೆ ಆಗಿರಬೇಕು ಹಾಗೂ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಸಹಕಾರ ಇಲಾಖೆ ದೃಢೀಕರಣ ಹೊಂದಿರಬೇಕು.
  • ಕರ್ನಾಟಕ ಕುರಿ & ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತದೊಂದಿಗೆ ಸಂಯೋಜನೆಗೊಂಡಿರುವ ಕುರಿ & ಉಣ್ಣೆ ಉತ್ಪಾದಕರ ಸಹಕಾರ ಸಂಘಗಳಲ್ಲಿನ ಅರ್ಹ ಕುರಿಗಾಹಿ ಸದಸ್ಯರಿಗೆ ಮಾತ್ರ ಅವಕಾಶ.
  • ಕರ್ನಾಟಕ ಸಹಕಾರ ಕುರಿ & ಮೇಕೆಗಳ ಸಾಕಾಣಿಕೆದಾರರ ಸಂಘಗಳ ಮಹಾ ಮಂಡಳಗಳ ಜೊತೆಗೆ ಷೇರುದಾರರಾಗಿ ನೋಂದಣಿಯಾಗಿರುವ ಕುರಿ & ಉಣ್ಣೆ ಉತ್ಪಾದಕರ ಸಹಕಾರ ಸಂಘಗಳಲ್ಲಿನ ಅರ್ಹ ಕುರಿಗಾಹಿ ಸದಸ್ಯರಿಗೆ ಮಾತ್ರ.
  • ಸಂಘವು ತನ್ನ ಎಲ್ಲಾ ಸದಸ್ಯರ ಹಾಗೂ ಅವರು ಹೊಂದಿರುವ ಕುರಿ / ಮೇಕೆಗಳ ಕುರಿತಂತೆ ಎಲ್ಲಾ ವಿವರಗಳನ್ನು ಇಲಾಖೆಯು ಒದಗಿಸುವ ನಿಗದಿತ ನಮೂನೆಯಲ್ಲಿ ನೀಡತಕ್ಕದ್ದು.
  • ಸದರಿ ಕಾರ್ಯಕ್ರಮದಲ್ಲಿ ಸರ್ಕಾರದ ನಿಯಮಗಳಂತೆ ಮಹಿಳೆಯರಿಗೆ (ಶೇ.33.3), ವಿಶೇಷ ಚೇತನರಿಗೆ (ಶೇ.3) ಆದ್ಯತೆ ನೀಡಲಾಗುವುದು.
  • ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಫಲಾನುಭವಿಗಳು ಜಾತಿ ಪ್ರಮಾಣ ಪತ್ರವನ್ನು ಹೊಂದಿರಬೇಕು (ಪ್ರಮಾಣ ಪತ್ರದಲ್ಲಿ ಆರ್ ಡಿ ನಂ: ಇರಬೇಕು)
  • ಅರ್ಜಿದಾರರು ಕಡ್ಡಾಯವಾಗಿ FRUITS ತಂತ್ರಾಂಶದಲ್ಲಿ ನೋಂದಾಯಿಸಿರಬೇಕು.

ಈ ಯೋಜನೆಯ (20+1) ಕುರಿ / ಮೇಕೆ ಘಟಕ ವೆಚ್ಚದ ವಿವರಗಳು:-

  • 20 ಹೆಣ್ಣು ಕುರಿ/ಮೇಕೆಗಳಿಗೆ (ಪ್ರತಿ ಹೆಣ್ಣು ಕುರಿ/ಮೇಕೆಗೆ-ರೂ.7,500) ರೂ.1.50,000 (ಕನಿಷ್ಟ 9 ತಿಂಗಳಿಂದ 18 ತಿಂಗಳ ವಯಸ್ಸು)
  • 2. ಒಂದು ಸುಧಾರಿತ ತಳಿ ಬಗರು / ಹೋತಕ್ಕೆ (ಕನಿಷ್ಟ 18 ತಿಂಗಳ ವಯಸ್ಸು)
  • 3. 50 / 2. ( ) (2.75% of animal cost GST) ಗರಿಷ್ಟ ಮೊತ್ತದಲ್ಲಿ ನೀಡಲಾಗುವುದು.

ಇತರೆ ವಿಷಯಗಳು :

ಮದುವೆಯಾಗುವವರಿಗೆ ಸಿಕ್ತು ಗುಡ್‌ನ್ಯೂಸ್.!! ಕೇಂದ್ರ ಸರ್ಕಾರದಿಂದ 2.50 ಲಕ್ಷ ಪ್ರೋತ್ಸಾಹ ಧನ

ಪಿಯು ಪಾಸಾದ ವಿದ್ಯಾರ್ಥಿಗಳಿಗೆ ಕೇಂದ್ರದಿಂದ ₹20,000 ಆರ್ಥಿಕ ನೆರವು.! ಇಲ್ಲಿಂದಲೇ ಅಪ್ಲೇ ಮಾಡಿ

Leave a Reply

Your email address will not be published. Required fields are marked *