ಕೇಂದ್ರ ಸರ್ಕಾರದ ಭರ್ಜರಿ ಸುದ್ದಿ.!! ಈ ಯೋಜನೆಯಡಿ 25 ವರ್ಷ ಕರೆಂಟ್‌ ಬಿಲ್‌ ಕಟ್ಟೋ ತಾಪತ್ರಯ ಇಲ್ಲ

ಹಲೋ ಸ್ನೇಹಿತರೇ, ಪಿಎಮ್ ನರೇಂದ್ರ ಮೋದಿ ಅವರು ನಮ್ಮ ದೇಶದ ಪ್ರಧಾನಮಂತ್ರಿ ಆದಾಗಿನಿಂದ ನಮ್ಮ ದೇಶ ಸಾಕಷ್ಟು ಬದಲಾವಣೆ ಮತ್ತು ಬೆಳವಣಿಗೆ ಎರಡನ್ನು ಕಂಡಿದೆ. ಮೋದಿ ರವರು ನಮ್ಮ ದೇಶದ ಜನರು ಕಷ್ಟದಲ್ಲಿ ಇರಬಾರದು ಮತ್ತು ಎಲ್ಲಾ ಅನುಕೂಲಗಳು ಅವರಿಗೆ ಸಿಗಬೇಕು ಎಂದು ಅನೇಕ ಯೋಜನೆಗಳನ್ನು ದೇಶದ ಜನರಿಗಾಗಿಯೇ ಜಾರಿಗೆ ತರುತ್ತಿದ್ದಾರೆ.

Solar Panel Scheme

ಅದರಲ್ಲಿಯೇ ಮಧ್ಯಮವರ್ಗದವರಿಗೆ ಮತ್ತು ಬಡಜನರಿಗೆ ಅನುಕೂಲ ಆಗುವ ಯೋಜನೆಗಳು ಇನ್ಮುಂದೆ ಬರುತ್ತಲಿವೆ.

ಮತ್ತೊಂದು ಹೊಸ ಯೋಜನೆ

ಈಗಾಗಲೇ ಅನೇಕ ಯೋಜನೆಗಳು ಮತ್ತು ಸೌಲಭ್ಯಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜಾರಿಗೆ ತರುತ್ತಲಿದ್ದು, ಇದೀಗ ದೇಶದ ಜನರಿಗಾಗಿ ಮತ್ತೊಂದು ಯೋಜನೆಯನ್ನು ಜಾರಿಗೆ ತರುವುದಕ್ಕೆ ಮುಂದಾಗಿದ್ದಾರೆ.

ಈ ಯೋಜನೆ ಇಂದ ಜನರಿಗೆ ಇನ್ನಷ್ಟು ಅನುಕೂಲ ಸಿಗಲಿದೆ. ಹಾಗಿದ್ದಲ್ಲಿ ಆ ಯೋಜನೆ ಯಾವುದು? ಅದರಿಂದ ಏನೆಲ್ಲಾ ಉಪಯೋಗ ಆಗುತ್ತದೆ? ತಿಳಿಸಿಕೊಡುತ್ತೆವೆ ನೋಡಿ..

ಪಿಎಮ್ ಸೂರ್ಯ ಘರ್ ಯೋಜನೆ

ಕೇಂದ್ರ ಸರ್ಕಾರವು ಪರಿಚಯಿಸುತ್ತಿರುವ ಈ ಹೊಸ ಯೋಜನೆಯಲ್ಲಿ ಹೆಸರು ಸೂರ್ಯ ಘರ್ ಯೋಜನೆಯೇ ಆಗಿದೆ. ಈ ಯೋಜನೆಯ ಮೂಲಕ 1 ಕೋಟಿಗಳ ಮನೆಗಳಿಗೆ ಸೋಲಾರ್ ಪ್ಯಾನೆಲ್ ಅನ್ನು ಹಾಕಿಸಲು ಸರ್ಕಾರವು ಸಹಾಯ ಮಾಡುತ್ತದೆ. ಸೋಲಾರ್ ಪ್ಯಾನೆಲ್ ನ ಅಳವಡಿಕೆಗಾಗಿ ಸುಮಾರು 18 ಸಾವಿರದಿಂದ 78 ಸಾವಿರದವರೆಗು ಜನರಿಗೆ ಸಹಾಯಧನವನ್ನು ಸರ್ಕಾರ ನೀಡಲಿದೆ. ಈ ಯೋಜನೆಯ ಸೌಲಭ್ಯವನ್ನು ಎಲ್ಲರೂ ಪಡೆಯಬಹುದು.

ಸರ್ಕಾರ ಮಾಡಿರುವ ಪ್ಲಾನ್ ನ ಅನುಸಾರ ಸುಮಾರು 1 ಕೋಟಿ ಮನೆಗಳಿಗೆ ಸೂರ್ಯಘರ್ ಯೋಜನೆಯ ಸೌಲಭ್ಯ ನೀಡಬೇಕು ಎಂದುಕೊಂಡಿದೆ. ಒಂದು ಸಾರಿ ನಿಮ್ಮ ಮನೆಯಲ್ಲಿ ಸೋಲಾರ್ ಪ್ಯಾನೆಲ್ ಅನ್ನು ಅಳವಡಿಕೆ ಮಾಡಿದರೆ, 25 ವರ್ಷಗಳ ಕಾಲ ವಿದ್ಯುತ್ ಬಿಲ್ ಕಟ್ಟುವ ಅವಶ್ಯಕತೆ ಇರುವುದಿಲ್ಲ.

ಜೊತೆಗೆ ನಿಮ್ಮ ಮನೆಯಲ್ಲಿ ಬಳಸಿ ಹೆಚ್ಚುವರಿ ಆಗುವ ವಿದ್ಯುತ್ ಅನ್ನು ಸರ್ಕಾರಿ ಸಂಸ್ಥೆಗಳಿಗೆ ಮಾರಿ, ಅದರಿಂದಲು ಹಣ ಗಳಿಸಬಹುದು. ಸೂರ್ಯ ಘರ್ ಯೋಜನೆ ಇಂದ ಇಷ್ಟೆಲ್ಲಾ ಉಪಯೋಗವಿದೆ.

ಬಂಗಾರ ಇನ್ನೂ ಭಾರೀ ಅಗ್ಗ.!! ಹಾಗಾದರೆ ಇಂದಿನ ಬೆಲೆ ಎಷ್ಟು ಗೊತ್ತಾ??

ಅರ್ಜಿ ಸಲ್ಲಿಕೆ ಹೇಗೆ?

*ಮೊದಲಿಗೆ ಈ https://pmsuryaghar.gov.in/ ಲಿಂಕ್ ಗೆ ಭೇಟಿ ನೀಡಿ

*ಇಲ್ಲಿ ಮೇಲ್ಛಾವಣಿಯ ಸೌರಕ್ಕಾಗಿ ಅನ್ವಯಿಸು ಎನ್ನುವ ಆಯ್ಕೆಯನ್ನು ಮೊದಲು ಸೆಲೆಕ್ಟ್ ಮಾಡಿ

*ಬಳಿಕ ನಿಮ್ಮ ರಾಜ್ಯದ ಹೆಸರು, ವಿದ್ಯುತ್ ವಿತರಣೆ ಮಾಡುವ ಕಂಪನಿಯ ಹೆಸರು ಎರಡನ್ನು ಸೆಲೆಕ್ಟ್ ಮಾಡಿ. ನಂತರ ನಿಮ್ಮ ಹೆಸರು ಹಾಗೂ ವಿದ್ಯುತ್ ಗ್ರಾಹಕರ ಸಂಖ್ಯೆ, ಫೋನ್ ನಂಬರ್ ಮತ್ತು ಇಮೇಲ್ ಎಲ್ಲವನ್ನು ನಮೂದಿಸಿ

*ಬಳಿಕ ಗ್ರಾಹಕರ ಸಂಖ್ಯೆ ಹಾಗೂ ಫೋನ್ ನಂಬರ್ ಮೂಲಕ ಲಾಗಿನ್ ಮಾಡಿ

*ಫಾರ್ಮ್ ನಲ್ಲಿರುವ ಸ್ಟೆಪ್ಸ್ ಫಾಲೋ ಮಾಡಿ ಮತ್ತು ಮೇಲ್ಚಾವಣಿ ಸೌರವನ್ನು ಅನ್ವಯಿಸಿ

*ಇಷ್ಟು ಪ್ರಕ್ರಿಯೆ ಮುಗಿದ ನಂತರ ನಿಮ್ಮ ವಿದ್ಯುತ್ ವಿತರಣಾ ಕಂಪನಿಯ ಜೊತೆಗೆ ರಿಜಿಸ್ಟರ್ ಆಗಿರುವ ಯಾವುದೇ ಸೆಲ್ಲರ್ ಇಂದ ನಿಮ್ಮ ಮನೆಯ ಮೇಲ್ಚಾವಣಿಯಲ್ಲಿ ಸೌರಫಲಕವನ್ನು ಅಳವಡಿಸಬಹುದು.

*ಸೌರಫಲಕ ಅಳವಡಿಸಿದ ಆನಂತರ ನೆಟ್ ಮೀಟರ್ ಪಡೆಯಲು ನಿಮ್ಮ ಎಲ್ಲಾ ವಿವರಗಳ ಜೊತೆಗೆ ಅರ್ಜಿಯನ್ನು ಸಲ್ಲಿಸಬೇಕು

*ನೆಟ್ ಮೀಟರ್ ಹಾಕಿದ ಬಳಿಕ ಹಾಗೂ ವಿದ್ಯುತ್ ವಿತರಣಾ ಕಂಪನಿ ಎಲ್ಲವನ್ನು ಒಮ್ಮೆವನ್ನು ಪರಿಶೀಲಿಸಿ, ಬಳಿಕ ನಿಮಗೆ ಕಮಿಷನ್ ನ ಪ್ರಮಾಣಪತ್ರವನ್ನು ಕೊಡುತ್ತದೆ.

*ಆಯೋಗದಿಂದ ನಿಮಗೆ ಒಂದು ವರದಿ ಬರುತ್ತದೆ, ಅದನ್ನು ಪಡೆದ ನಂತರ ಪೋರ್ಟಲ್ ನಲ್ಲಿ ನಿಮ್ಮ ಬ್ಯಾಂಕ್ ಅಕೌಂಟ್ ಡೀಟೇಲ್ಸ್ ಮತ್ತು ರದ್ದು ಮಾಡಿರುವ ಚೆಕ್ ಅನ್ನು ಸಲ್ಲಿಸಬೇಕಾಗುತ್ತದೆ. ನಂತರ 30 ದಿನಗಳ ಒಳಗೆ ಸಬ್ಸಿಡಿ ಮೊತ್ತ ನಿಮ್ಮ ಬ್ಯಾಂಕ್ ಅಕೌಂಟ್ ತಲುಪುತ್ತದೆ.

ಇತರೆ ವಿಷಯಗಳು:

ರಾಜ್ಯದಲ್ಲಿ ಅಂತೂ ಏರಿಕೆ ಕಂಡ ಇಂಧನ ಬೆಲೆ.!! ಹಾಗಾದ್ರೆ ಇಂದಿನ ಬೆಲೆ ಎಷ್ಟು??

ಗೃಹಲಕ್ಷ್ಮಿಯರೇ ಹುಷಾರ್.!!‌ ಇನ್ಮುಂದೆ ಹಣ ಬೇಕು ಅಂದ್ರೆ ಈ ಕೆಲಸ ಕಡ್ಡಾಯ

Leave a Reply

Your email address will not be published. Required fields are marked *