1 ರಿಂದ 10ನೇ ತರಗತಿ ಮಕ್ಕಳಿಗೆ ಸಿಹಿ ಸುದ್ದಿ: ವಾರಕ್ಕೆ 2 ಬಾರಿ ಮೊಟ್ಟೆ, ಬಾಳೆಹಣ್ಣು, ಶೇಂಗಾ ಚಿಕ್ಕಿ ವಿತರಣೆ!

ಬೆಂಗಳೂರು: 2024 -25 ನೇ ಸಾಲಿಗೆ ಶಾಲಾ ಮಕ್ಕಳಲ್ಲಿರುವ ಅಪೌಷ್ಟಿಕತೆಯ ನಿವಾರಣೆಗಾಗಿ ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 1 ರಿಂದ 10ನೇ ತರಗತಿಯ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟದ ಜೊತೆಗೆ ಬೇಯಿಸಿದ ಮೊಟ್ಟೆಯನ್ನು ನೀಡಲಾಗುವುದು. ಮೊಟ್ಟೆಯನ್ನು ಸೇವಿಸದ ಮಕ್ಕಳಿಗೆ ಬಾಳೆಹಣ್ಣು ಅಥವಾ ಶೇಂಗಾ ಚಿಕ್ಕಿಯನ್ನು ವಿತರಣೆ ಮಾಡಲಾಗುವುದು.

students

ಪೂರಕ ಪೌಷ್ಟಿಕ ಆಹಾರವನ್ನು ವಿತರಿಸುವ ಬಗ್ಗೆ ರಾಜ್ಯ ಸರ್ಕಾರವು, ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ, ಅಕ್ಷರ ದಾಸೋಹ ಯೋಜನೆಯ ಮೂಲಕ ಮೊಟ್ಟೆ ಅಥವಾ ಬಾಳೆಹಣ್ಣು ,ಶೇಂಗಾ ಚಿಕ್ಕಿ ವಿತರಣೆ ಮಾಡಲು ತಿಳಿಸಲಾಗಿದೆ. 2024- 25ನೇ ಸಾಲಿನಿಂದ ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ 1ರಿಂದ 8ನೇ ತರಗತಿ ಮಕ್ಕಳು ಸೇರಿದಂತೆ 9 ಮತ್ತು 10ನೇ ತರಗತಿ ಮಕ್ಕಳಿಗೂ ಸಹ ಈ ಯೋಜನೆಯನ್ನು ವಿಸ್ತರಿಸಲಾಗಿದೆ.

ವಾರ್ಷಿಕ ಒಟ್ಟು 80 ದಿನಗಳ ಅವಧಿಗೆ 1ರಿಂದ 10ನೇ ತರಗತಿ ಮಕ್ಕಳಿಗೆ ಯೋಜನೆಯನ್ನು ಅನುಷ್ಠಾನಗೊಳಿಸಲು ತಿಳಿಸಲಾಗಿದೆ. ಜೂನ್ 2024 ರಿಂದ ಮಾರ್ಚ್ 2025ರ ವರೆಗೆ 40 ವಾರಗಳ ವರೆಗೆ ವೇಳಾಪಟ್ಟಿಯಂತೆ ಶಾಲಾ ಮಕ್ಕಳಿಗೆ ಬೇಯಿಸಿದ ಮೊಟ್ಟೆಯನ್ನು ಸೇವಿಸದ ಮಕ್ಕಳಿಗೆ ಬಾಳೆಹಣ್ಣು, ಶೇಂಗಾ ಚಿಕ್ಕಿಯನ್ನು ಪೌಷ್ಟಿಕ ಆಹಾರದ ರೂಪದಲ್ಲಿ ಮಧ್ಯಾಹ್ನದ ಬಿಸಿ ಊಟದೊಂದಿಗೆ ವಿತರಣೆ ಮಾಡಲು ಮಾರ್ಗಸೂಚಿಯನ್ನು ನೀಡಲಾಗಿದೆ.

ಇದನ್ನೂ ಸಹ ಓದಿ: PM ಶ್ರೀ ಯೋಜನೆಯಡಿ 183 ಸರ್ಕಾರಿ ಶಾಲೆಗಳು ಇನ್ನೊಂದು ಹೆಜ್ಜೆ ಮುಂದೆ!

ಪ್ರತಿ ವಾರದ ಮಂಗಳವಾರ & ಗುರುವಾರ ಪೌಷ್ಟಿಕ ಆಹಾರವಾಗಿ ಮೊಟ್ಟೆ, ಬಾಳೆಹಣ್ಣು ಅಥವಾ ಶೇಂಗಾ ಚಿಕ್ಕಿಯನ್ನು ವಿದ್ಯಾರ್ಥಿಗಳಿಗೆ ನೀಡಲಾಗುವುದು. ಒಂದು ವೇಳೆ ಮಂಗಳವಾರ ಅಥವಾ ಗುರುವಾರ ರಜೆ ಇದ್ದಲ್ಲಿ ಮುಂದಿನ ದಿನದಂದು ವಿತರಣೆ ಮಾಡಲು ತಿಳಿಸಲಾಗಿದೆ.

ಜಾನುವಾರು ಶೆಡ್ ನಿರ್ಮಿಸಲು ರೂ. 57,000 ಸಹಾಯಧನ! ಈ ರೀತಿ ಅರ್ಜಿ ಸಲ್ಲಿಸಿ

ಪ್ಯಾನ್‌ ಕಾರ್ಡ್‌ ಬಳಕೆದಾರಿಗೆ ಶಾಕಿಂಗ್‌ ನ್ಯೂಸ್.!!‌ ಇಂದೇ ಈ ಕೆಲಸ ಮಾಡುವುದು ಉತ್ತಮ

Leave a Reply

Your email address will not be published. Required fields are marked *