ಬೆಂಗಳೂರು: ರಸ್ತೆಗಳ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲಾ ಘಟಕಗಳಲ್ಲಿ ವಿಶೇಷವಾದ ಕಾರ್ಯಾಚರಣೆಗಳನ್ನು ನಡೆಸುವ ಕುರಿತಂತೆ ಸಂಚಾರ ಮತ್ತು ರಸ್ತೆಗಳ ಸುರಕ್ಷತೆಗಳ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಾದ ಆಲೋಕ್ ಕುಮಾರ್ ಅವರು ಸೂಚನೆಯನ್ನು ನೀಡಿದ್ದಾರೆ.
ಎಲ್ಲಾ ಘಟಕಗಳಲ್ಲಿ ಸಂಭವಿಸುವ ರಸ್ತೆಗಳ ಅಪಘಾತಗಳನ್ನು ತಡೆಗಟ್ಟುವಂತಹ ನಿಟ್ಟಿನಲ್ಲಿ ಈಗಾಗಲೇ ಅತಿ ಪ್ರಖರದ ಬೆಳಕನ್ನು ಹೊರಹಾಕುವ ಮತ್ತು ಕಣ್ಣು ಕುಕ್ಕುವಂತಹ LED ಲೈಟ್ ಗಳನ್ನು ಅಳವಡಿಸಿರುವಂತಹ ವಾಹನಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಲು ವಿಶೇಷವಾದ ಕಾರ್ಯಾಚರಣೆಯನ್ನು ನಡೆಸುವಂತೆ ಸೂಚನೆಯನ್ನು ನೀಡಲಾಗಿದೆ.
ಈ ಕಾರ್ಯಾಚರಣೆಗೆ ಆಸಕ್ತಿಯನ್ನು ತೋರಿಸಿರುವ ಘಟಕಗಳಾದ ಬೆಂಗಳೂರು ನಗರ, ಮಂಗಳೂರು ನಗರ, ಹುಬ್ಬಳ್ಳಿ-ಧಾರವಾಡ ನಗರ, ಉತ್ತರ ಕನ್ನಡ ಜಿಲ್ಲೆ ರಾಯಚೂರು, ಚಾಮರಾಜನಗರ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಹೆಚ್ಚು ಪ್ರಕರಣಗಳನ್ನು ದಾಖಲು ಮಾಡಿರುವುದನ್ನು ಶ್ಲಾಘಿಸಲಾಗಿದೆ.
ಇದೇ ರೀತಿ, ವಿರುದ್ಧದ ದಿಕ್ಕಿನಲ್ಲಿ ವಾಹನವನ್ನು ಚಾಲನೆ (Wrong side driving), ಪುಟ್ ಪಾತ್ ಮೇಲೆ ವಾಹನಗಳ ಚಾಲನೆಯ (Driving on Foot path) ಬಗ್ಗೆ ವಿಶೇಷವಾದ ಕಾರ್ಯಾಚರಣೆಯನ್ನು ಮಾಡುವುದು, ಇದರ ಜೊತೆಗೆ Defective Number Plate ವಿರುದ್ಧವೂ ಆಗಸ್ಟ್ 1ರಿಂದ ವಿಶೇಷವಾದ ಕಾರ್ಯಾಚರಣೆಯನ್ನು ನಡೆಸಲು ಎಲ್ಲಾ ಘಟಕಗಳಲ್ಲಿ ಕ್ರಮವನ್ನು ತೆಗೆದುಕೊಳ್ಳಲು ಸೂಚನೆ ನೀಡಲಾಗಿದೆ.
ಈ ಒಂದು ಕಾರ್ಡ್ ಇದ್ರೆ 2 ಲಕ್ಷ ವಿಮೆ, 3 ಸಾವಿರ ರೂ. ಸಹಾಯಧನ!
ರಾಷ್ಟ್ರೀಯ ಹೆದ್ದಾರಿ(National Highway) ಗಳ ಮೇಲೆ ವಿರುದ್ಧವಾದ ದಿಕ್ಕಿನಲ್ಲಿ ವಾಹನಗಳನ್ನು ಚಾಲನ ಮಾಡುವುದು ಜೀವಕ್ಕೆ ಅಪಾಯಕಾರಿಯಾಗಿದ್ದು, ಇಂತಹ ಹೆದ್ದಾರಿಗಳ ಮೇಲೆ ವಿರುದ್ಧ ದಿಕ್ಕಿನಲ್ಲಿ(Wrong side driving) ವಾಹನವನ್ನು ಚಾಲನೆ ಮಾಡುವವರ ಮೇಲೆ BNS 281 ಅಡಿಯಲ್ಲಿ ಮತ್ತು 184 IMV ಕಾಯ್ದೆಯಡಿ ಹಾಗೂ FIR ದಾಖಲು ಮಾಡಲು ಕ್ರಮವನ್ನು ಜರುಗಿಸುವಂತೆ ತಿಳಿಸಿದ್ದಾರೆ.
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ರಾಂಗ್ ಸೈಡ್ ನ ಡ್ರೈವಿಂಗ್‌ಗಾಗಿ FIR ದಾಖಲಿಸಬೇಕು ಮತ್ತು ಡಿಎಲ್ ವಶಪಡಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಬೆಂಗಳೂರು ನಗರ ಸೇರಿದಂತೆ ನಗರದ ಪ್ರದೇಶಗಳ ವಿರುದ್ಧ ದಿಕ್ಕಿನಲ್ಲಿ ಸಂಚರಿಸುವುದು ಹಾಗೂ ಪುಟ್ ಪಾತ್ ಮೇಲೆ ಮೋಟಾರು ಸೈಕಲ್‌ಗಳ ಚಾಲನೆಯನ್ನು ಮಾಡುವುದು ತುಂಬ ಸಾಮಾನ್ಯವಾಗಿರುತ್ತದೆ. ಅದಕ್ಕಾಗಿ ಈ ಕುರಿತು ವಿಶೇಷವಾದ ಕಾರ್ಯಾಚರಣೆಯನ್ನು ಮಾಡುವುದು. ಇದರ ಬಗ್ಗೆ ಮುಂಚಿತವಾಗಿ ಸಾಮಾಜಿಕ ಜಾಲತಾಣ, ಕರಪತ್ರ ಹಾಗೂ ದ್ವನಿ ವರ್ದಕದ ಉಪಕರಣಗಳ ಮೂಲಕ ತಿಳಿವಳಿಕೆಯನ್ನು ನೀಡುವುದರ ಬಗ್ಗೆ ಕ್ರಮವನ್ನು ವಹಿಸಬೇಕು. ಕ್ರಮವನ್ನು ಕೈಗೊಂಡು ಆ. 31 ರೊಳಗಾಗಿ ಪಾಲನಾ ವರದಿ ಸಲ್ಲಿಸುವಂತೆ ಸೂಚನೆಯನ್ನು ನೀಡಿದ್ದಾರೆ.
ಇತರೆ ವಿಷಯಗಳು
ಕೇಂದ್ರ ಬಜೆಟ್ 2024: ಪ್ರತಿ ವರ್ಷ 1 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ 10 ಲಕ್ಷ ರೂ
ಕೇಂದ್ರದಿಂದ ಬಜೆಟ್ ಧಮಾಕ ಆಫರ್.!! ನಿರ್ಮಲ ಸೀತಾರಾಮನ್‌ರವರ ಪ್ರಮುಖ ಘೋಷಣೆ ಇದು