ನೀವು ಟ್ರಾಫಿಕ್‌ನಲ್ಲಿದ್ದಾಗ ನಿಮ್ಮ ಮುಂದೆ ಲೈಟ್ ಬೀಳುವುದನ್ನು ನೋಡಿರುತ್ತೀರಿ. ಈ 3 ಲೈಟ್‌ಗಳು ಏನನ್ನು ಸೂಚಿಸುತ್ತದೆ ಎನ್ನುವುದು ಸಹ ಎಲ್ಲರಿಗೂ ಸಹ ತಿಳಿದೆ ಇದೆ. ಕೆಂಪು ಬಣ್ಣದ ಲೈಟ್ ಇದ್ದರೆ ನಿಲ್ಲುವಂತೆ, ಹಳದಿ ಬಣ್ಣದ ಲೈಟ್ ಹೊರಡಲು ಸಿದ್ಧರಾಗಿ ಹಾಗೂ ಹಸಿರು ಬಣ್ಣದ ಲೈಟ್ ಹೋಗಿ ಎನ್ನುವ ಸೂಚನೆಯನ್ನು ನೀಡುತ್ತವೆ.
ಇದು ವಿಶ್ವದ ಯಾವುದೇ ಮೂಲೆಗೆ ಹೋದರು ಸಹ ಅನ್ವಯವಾಗುವಂತಹ ನಿಯಮವಾಗಿದೆ. ಹಲವು ವರ್ಷಗಳಿಂದಲು ಈ 3 ಬಣ್ಣಗಳೆ ಬಳಕೆಯಲ್ಲಿದೆ.
ಅದ್ರೆ ಈ ಲೈಟ್‌ನ ಸಾಲಿಗೆ ಹೊಸದೊಂದು ಬಣ್ಣವು ಸೇರಿಕೊಳ್ಳುತ್ತಿದೆ. ಇಂಗ್ಲೆಂಡ್‌ನಲ್ಲಿ ಈ ರೀತಿಯ ಪ್ರಯೋಗಕ್ಕೆ ಮುಂದಾಗುವುದಾಗಿ ತಿಳಿದುಬಂದಿದೆ. ಈ 4ನೇ ಬಣ್ಣವು ಡ್ರೈವರ್ ಲೆಸ್ ಕಾರುಗಳಿಗೆ ಅನ್ವಯವಾಗಲಿದೆಯಂತೆ. ಚಾಲಕರ ರಹಿತವಾಗಿ ಕಾರುಗಳಿಗೆ ಬಿಳಿಯ ಬಣ್ಣದ ಹೊಸ ಲೈಟ್ ಅನ್ನು ಜಾರಿಯನ್ನು ಮಾಡಲು ಅಧ್ಯಯನವು ನಡೆದಿದೆ.
ವೇಮೊ, ಸ್ವಯಂ-ಚಾಲನಾ ಟ್ಯಾಕ್ಸಿ ಕಂಪನಿ, ಕ್ಯಾಲಿಫೋರ್ನಿಯಾ & ಅರಿಜೋನಾದಲ್ಲಿ ಸುಮಾರು 5ನೇ ಹಂತದ ಅಥವಾ SAE4 ಅನ್ನು ತಲುಪಿದೆ. ಟೆಸ್ಲಾಗಳು ಮತ್ತು ಇತರ ಚಾಲಕರ ರಹಿತ ವಾಹನಗಳು ಜನಪ್ರಿಯತೆಯನ್ನು ಗಳಿಸುತ್ತಿವೆ. ಏತನ್ಮಧ್ಯೆ, ಕೆಲವು ವಿನಾಯಿತಿಗಳೊಂದಿಗೆ ಇಂಗ್ಲೆಂಡ್ ರಸ್ತೆಗಳಲ್ಲಿ ಸ್ವಯಂ-ಚಾಲಿತಾ ಕಾರುಗಳನ್ನು ಬಳಸಬಹುದು. ಆದರೆ ಅಧಿಕೃತವಾಗಿ ಅನುಮತಿಯನ್ನು ನೀಡಲಾಗಿಲ್ಲ. ಸ್ವಯಂಚಾಲಿತ ವಾಹನಗಳನ್ನು ಕಾಯಿದೆಯು 2026 ರ ಮುಂಚೆಯೇ ಅವುಗಳನ್ನು ಅನುಮತಿಸಬಹುದು.
ಆದರೆ ಮುಂದೊಂದು ದಿನ ರಸ್ತೆಯಲ್ಲಿ ಚಾಲಕ ರಹಿತವಾದ ಕಾರುಗಳಿಂದ ಹಾಗೂ ಚಾಲಕರಿರುವ ಕಾರುಗಳು ಕೂಡ ರಸ್ತೆಯಲ್ಲಿ ಓಡಾಡಲಿವೆ. ಈ ಕಾರಣಕ್ಕೆ ಈ ಟ್ರಾಫಿಕ್ ಸಿಗ್ನಲಿಂಗ್ ವ್ಯವಸ್ಥೆಯನ್ನು ಜಾರಿಯನ್ನು ಮಾಡಲು ತಜ್ಞರ ತಂಡವು ಮುಂದಾಗಿದೆ.
ಹಿರಿಯ ನಾಗರಿಕರಿಗಾಗಿ ಹೊಸದೊಂದು ಉಳಿತಾಯ ಯೋಜನೆ..!
ಬಿಳಿ ಹಂತದ ಪರಿಕಲ್ಪನೆಯು ಹೊಸ ಟ್ರಾಫಿಕ್ ಸಿಗ್ನಲ್ ಅನ್ನು ಸಂಯೋಜಿಸುತ್ತದೆ, ಈ ಕಾರಣದಿಂದ ಮಾನವ ಚಾಲಕರು ತಾವು ಏನು ಮಾಡಬೇಕು ಎನ್ನುವುದನ್ನು ತಮ್ಮ ಕಾರಿನ ಪರದೆ ಮೇಲೆ ಮೂಡುವಂತೆ ಮಾಡಲಾಗುತ್ತದೆ. ಕೆಂಪು ಲೈಟ್‌ಗಳ ನಿಲ್ಲುವ ಸೂಚನೆ ನೀಡಿದರೆ ಹಸಿರು ದೀಪಗಳು ಮುಂದೆ ಹೋಗಲು ಹಾಗೂ ಬಿಳಿಯ ಲೈಟ್‌ಗಳು ಕಾರನ್ನು ಸರಳವಾಗಿ ಓಡಿಸಲು ಮಾನವ ಚಾಲಕರಿಗೆ ಸೂಚನೆಯನ್ನು ನೀಡಲಿವೆ ಎಂದು ತಿಳಿದು ಬಂದಿದೆ.
ಪ್ರಯಾಣದ ಸಮಯ, ಇಂಧನದ ದಕ್ಷತೆ & ಸುರಕ್ಷತೆಯನ್ನು ಸುಧಾರಿಸುವ ಹೊಸ ವ್ಯವಸ್ಥೆಯು ಹೇಗೆ ಕಾರ್ಯನಿರ್ವಹಿಸುತ್ತದೆ ಎನ್ನುವುದನ್ನು ದೃಶ್ಯೀಕರಿಸಲು ಡಾ ಹಜ್ಬಾಬೈ ಅವರ ತಂಡದೊಂದಿಗೆ ಹಲವಾರು ಕಂಪ್ಯೂಟರ್ ಸಿಮ್ಯುಲೇಶನ್‌ಗಳನ್ನು ಮಾಡಿದ್ದಾರೆ. ಈಗ ಪ್ರಾಯೋಗಿಕವಾಗಿ ಎಲ್ಲಾ ಕಾರುಗಳು ಸ್ವಾಯತ್ತ ವಾಹನಗಳಾಗುವವರೆಗೆ ಸಾಂಪ್ರದಾಯಿಕವಾದ ಕೆಂಪು, ಹಳದಿ & ಹಸಿರು ದೀಪಗಳನ್ನು ಹೆಚ್ಚಿನ ಸಮಯದವರೆಗೆ ಬಳಸಲಾಗುತ್ತದ. ಬಿಳಿ ಲೈಟ್ ನ ಪರಿಕಲ್ಪನೆಯು ಇನ್ನೂ ಕಾರ್ಯರೂಪಕ್ಕೆ ಬರಬೇಕಿದೆ ಎಂದು ತಂಡವು ಮಾಹಿತಿಯನ್ನು ತಿಳಿಸಿದೆ.
ಆದರೆ ಈಗ ಎಲ್ಲಾ ಕಡೆಗಳಲ್ಲೂ ಈ ಮೂರು ಬಣ್ಣದ ಸಿಗ್ನಲಿಂಗ್ ವ್ಯವಸ್ಥೆಯನ್ನೇ ಎಲ್ಲಾ ಕಾರುಗಳು ಅನುಸರಿಸುತ್ತಿವೆ. ಇದೇ ನಿಯಮವನ್ನೆ ಅವುಗಳು ಸಹ ಪಾಲಿಸುತ್ತಿವೆ. ಸ್ವಯಂ ಚಾಲಿತವಾದ ಕಾರುಗಳು ಮುಂದೆ ಚಲಿಸುವ ಕಾರುಗಳನ್ನು ಹಿಂಬಾಲಿಸಿಕೊಂಡು ಟ್ರಾಫಿಕ್ ಕುರಿದತ ಮಾಹಿತಿಯನ್ನು ಪಡೆಯುತ್ತವೆ, ಹಾಗೆಯೆ ಗೂಗಲ್ ಮ್ಯಾಪಿಂಗ್ ಮೂಲಕವೇ ಮಾಹಿತಿಯನ್ನು ಕಲೆಹಾಕಿರುತ್ತವೆ. ಸಿಗ್ನಲ್ ಇದ್ದಾಗ ತಾನಾಗಿಯೇ ರೆಡ್ ಲೈಟ್ ಬಂದಾಗ ನಿಲ್ಲುವಂತಹ ಸೂಚನೆಗೆ ಅವು ಬದ್ಧವಾಗಿರುತ್ತವೆ. ಆದ್ರೆ ಬಿಳಿಯ ಬಣ್ಣದ ಕುರಿತು ಅವುಗಳು ಕಂಪ್ಯೂಟಿಂಗ್ ಅಗತ್ಯವಾಗಿದೆ.
ಈ ನಾಲ್ಕನೆ ಬಣ್ಣದ ಕುರಿತಂತೆಯೆ ಅಧ್ಯಯನಗಳು ಆರಂಭವಾಗಿದ್ದು ಕಾರಿನ ಕಂಪ್ಯೂಟಿಂಗ್ ನಡೆಯುವುದು ಮಾತ್ರ ಇನ್ನೂ ಬಾಕಿ ಉಳಿದಿದೆ. ಈ ಪ್ರಯೋಗಯು ಯಶಸ್ವಿಯಾದರೆ ಸಿಗ್ನಲ್ ಲೈಟ್‌ಗಳಲ್ಲಿ ನಾವು ಇನ್ಮುಂದೆ ನಾಲ್ಕು ಬಣ್ಣವನ್ನು ನೋಡಬಹುದು. ಇದು ಇಂಗ್ಲೆಂಡ್‌ನಲ್ಲಿ ಪ್ರಯೋಗಿಕವಾಗಿ ಜಾರಿಯಾಗಲಿದೆ.
ಇತರೆ ವಿಷಯಗಳು:
ಎಣ್ಣೆಪ್ರಿಯರಿಗೆ ಸಂತಸದ ಸುದ್ದಿ.!! ಕರ್ನಾಟಕಕ್ಕೆ ಬರಲಿದೆ ದೇಶೀಯ ‘ಹುಲಿ’ ರಮ್..!
ರಾಜ್ಯದ ರೈತರಿಗೆ ಗುಡ್ ನ್ಯೂಸ್! ವಿವಿಧ ಯೋಜನೆಗಳಡಿ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ