ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ತಿರುವನಂತಪುರಂ- ಮಂಗಳೂರು ನಡುವೆ ಪ್ರಯಾಣಿಸುವವರಿಗೆ ಪ್ರಮುಖ ಮಾಹಿತಿ ಇದೆ. ತಿರುವನಂತಪುರಂ ಸೆಂಟ್ರಲ್-ಮಂಗಳೂರು ಸೆಂಟ್ರಲ್ ನಡುವಿನ ವಂದೇ ಭಾರತ್ ರೈಲು ವೇಳಾಪಟ್ಟಿಯನ್ನು ಮೇ 13 ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಲಾಗಿದೆ. ಹೊಸ ವೇಳಾಪಟ್ಟಿಯನ್ನು ತಿಳಿಯಲು ಈ ಲೇಖನವನ್ನು ತಪ್ಪದೇ ಕೊನೆವರೆಗೂ ಓದಿ.
ಈ ಕುರಿತು ಪ್ರಕಟಣೆ ಮೂಲಕ ಮಾಹಿತಿ ನೀಡಲಾಗಿದೆ. ರೈಲು ಸಂಖ್ಯೆ 20632 ತಿರುವನಂತಪುರಂ ಸೆಂಟ್ರಲ್-ಮಂಗಳೂರು ಸೆಂಟ್ರಲ್ ರೈಲು ಮೇ 13 ರಿಂದ ಬದಲಾದ ವೇಳಾಪಟ್ಟಿಯ ಪ್ರಕಾರ ಚಲಿಸುತ್ತದೆ. ಪ್ರಯಾಣಿಕರು ಪರಿಷ್ಕೃತ ಸಮಯವನ್ನು ತಿಳಿದುಕೊಳ್ಳಲು ವಿನಂತಿಸಲಾಗಿದೆ.
ತಿರುವನಂತಪುರಂ ಸೆಂಟ್ರಲ್-ಮಂಗಳೂರು ಸೆಂಟ್ರಲ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಎರ್ನಾಕುಲಂ ಜಂಕ್ಷನ್, ತ್ರಿಶೂರ್, ಶೋರ್ನೂರ್ ಜಂಕ್ಷನ್, ತಿರೂರ್, ಕೊಯಿಕ್ಕೋಡ್, ಕಣ್ಣೂರು, ಕಾಸರಗೋಡು ಮೂಲಕ ಸಂಚರಿಸಲಿದೆ. ತಿರುವನಂತಪುರಂ ಸೆಂಟ್ರಲ್ನಿಂದ 19.56/19.58 ಕ್ಕೆ ಹೊರಡುವ ವಂದೇ ಭಾರತ್ ರೈಲು 3.48 ಕಾಸರಗೋಡಿಗೆ ಆಗಮಿಸುತ್ತದೆ/ನಿರ್ಗಮಿಸುತ್ತದೆ.
ತಿರುವನಂತಪುರಂ ಸೆಂಟ್ರಲ್-ಮಂಗಳೂರು ಸೆಂಟ್ರಲ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಉಳಿದ ಸಮಯ, ಪ್ರಯಾಣ ದರ, ಕೋಚ್ಗಳ ಸಂಯೋಜನೆ ಮತ್ತು ನಿಲ್ದಾಣದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಪಾಲಕ್ಕಾಡ್ ರೈಲ್ವೆ ವಿಭಾಗ ಸ್ಪಷ್ಟಪಡಿಸಿದೆ. ಮಂಗಳೂರು ಸೆಂಟ್ರಲ್-ಕಾಸರಗೋಡು-ತಿರುವನಂತಪುರಂ ನಡುವಿನ ವಂದೇ ಭಾರತ್ ರೈಲು ಸೇವೆಯನ್ನು ಮಾರ್ಚ್ 12 ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು.
Second List: ಆವಾಸ್ ಯೋಜನೆ ಎರಡನೇ ಪಟ್ಟಿ ಬಿಡುಗಡೆ! ಹೆಸರಿದ್ದವರ ಖಾತೆಗೆ ಹಣ
ಕಾಸರಗೋಡು ಮತ್ತು ತಿರುವನಂತಪುರಂ ನಡುವೆ ಓಡುತ್ತಿದ್ದ ರೈಲನ್ನು ಕರ್ನಾಟಕ ಕರಾವಳಿಯ ಮಂಗಳೂರು ಸೆಂಟ್ರಲ್ ಸ್ಟೇಷನ್ ವರೆಗೆ ವಿಸ್ತರಿಸಲಾಯಿತು. ಮಂಗಳೂರು ಸೆಂಟ್ರಲ್-ಕಾಸರಗೋಡು-ತಿರುವನಂತಪುರಂ ನಡುವೆ ರೈಲು ಸಂಖ್ಯೆ 20362 ಮತ್ತು ತಿರುವನಂತಪುರಂ-ಕಾಸರಗೋಡು-ಮಂಗಳೂರು ಸೆಂಟ್ರಲ್ ನಡುವೆ ರೈಲು ಸಂಖ್ಯೆ 20632 ಸಂಚರಿಸುತ್ತಿವೆ.
ಇದೀಗ ಮೇ 13 ರಿಂದ ಜಾರಿಗೆ ಬರುವಂತೆ ಮಂಗಳೂರು ಸೆಂಟ್ರಲ್ ಮತ್ತು ತಿರುವನಂತಪುರಂ ಸೆಂಟ್ರಲ್ ನಡುವಿನ ವೇಳಾಪಟ್ಟಿಯನ್ನು ರೈಲ್ವೆ ಇಲಾಖೆ ಬದಲಾಯಿಸಿಲ್ಲ, ತಿರುವನಂತಪುರ-ಕಾಸರಗೋಡು-ಮಂಗಳೂರು ಸೆಂಟ್ರಲ್ ನಡುವಿನ ವೇಳಾಪಟ್ಟಿಯನ್ನು ಮಾತ್ರ ಪರಿಷ್ಕರಿಸಲಾಗಿದೆ.
ಮಂಗಳೂರು ನಗರವು ಎರಡು ವಂದೇ ಭಾರತ್ ರೈಲುಗಳ ಮೂಲಕ ಸಂಪರ್ಕ ಹೊಂದಿದೆ. ಇನ್ನೊಂದು ವಂದೇ ಭಾರತ್ ರೈಲು ಮಂಗಳೂರು ಮತ್ತು ಮಡಗಾಂವ್ ನಡುವೆ ಸಂಚರಿಸುತ್ತಿದೆ. ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಮಂಗಳೂರು ಸೆಂಟ್ರಲ್-ತಿರುವನಂತಪುರಂ ಸೆಂಟ್ರಲ್ ರೈಲು ಸಂಚಾರ ಆರಂಭಿಸಲಾಗಿದೆ.
ಇತರೆ ವಿಷಯಗಳು:
ವಾಹನ ಸವಾರರಿಗೆ ಹೊಸ ಸಿಸ್ಟಂ! ಇನ್ಮುಂದೆ ಟೋಲ್ ಪ್ಲಾಜಾ ಇಲ್ಲ, ಫಾಸ್ಟ್ಯಾಗ್ ಇಲ್ಲ?
ಪೋಸ್ಟ್ ಆಫೀಸ್ ಭರ್ಜರಿ ಕೊಡುಗೆ.!! ಒಮ್ಮೆ ಹಣ ಇಟ್ರೆ ಲೈಫ್ ಸೆಟಲ್