ವಿದ್ಯಾರ್ಥಿಗಳಿಗೆ ಸಿಗಲಿದೆ 15,000 ರೂ. ಸ್ಕಾಲರ್ಶಿಪ್! ಅರ್ಜಿ ಸಲ್ಲಿಕೆ ಆರಂಭ

ಹಲೋ ಸ್ನೇಹಿತರೇ, ವಿದ್ಯಾಸಿರಿ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಕೆ ಶುರುವಾಗಿದೆ. ಆಸಕ್ತಿ ಇರುವ ಉನ್ನತ ಶಿಕ್ಷಣೆ ಪಡೆಯಲು ಬಯಸುವ ವಿದ್ಯಾರ್ಥಿಗಳು ಇದಕ್ಕಾಗಿ ಅರ್ಜಿ ಸಲ್ಲಿಸಬಹುದು. ಇದು ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಸಲುವಾಗಿ ಸರ್ಕಾರ ಜಾರಿಗೆ ತಂದಿರುವ ಸ್ಕಾಲರ್ಶಿಪ್ ಆಗಿದ್ದು, ಮೆಟ್ರಿಕ್ ಮುಗಿಸಿ ಉನ್ನತ ಶಿಕ್ಷಣಕ್ಕೆ ಸೇರಿಕೊಂಡು, ಹಾಸ್ಟೆಲ್ ಸೌಲಭ್ಯ ಸಿಗದ ವಿದ್ಯಾರ್ಥಿಗಳಿಗೆ ಈ ಸ್ಕಾಲರ್ಶಿಪ್ ನ ಮೂಲಕ ಸರ್ಕಾರದ ಕಡೆಯಿಂದ ಆರ್ಥಿಕ ಸಹಾಯ ಸಿಗಲಿದೆ.

vidyasiri scholarship
vidyasiri scholarship

ವಿದ್ಯಾಸಿರಿ ಸ್ಕಾಲರ್ಶಿಪ್ :

ಒಬ್ಬ ವಿದ್ಯಾರ್ಥಿಗೆ ಪ್ರತಿ ತಿಂಗಳು ₹1500 ರೂಪಾಯಿಯ ಹಾಗೆ, 10 ತಿಂಗಳ ಶೈಕ್ಷಣಿಕ ವರ್ಷದ ಅವಧಿಗೆ ₹15,000 ರೂಪಾಯಿಗಳ ಸ್ಕಾಲರ್ಶಿಪ್ ಅನ್ನು ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಕೊಡಲಾಗುತ್ತದೆ. SC/ST ಅಥವಾ OBC ವರ್ಗಕ್ಕೆ ಸೇರಿದ ವಿದ್ಯಾರ್ಥಿ ಆಗಿದ್ದು, ಅದರ ಕ್ಯಾಸ್ಟ್ ಸರ್ಟಿಫಿಕೇಟ್ ಇರಬೇಕು. 2A, 3A ಅಥವಾ 3B OBC ವಿದ್ಯಾರ್ಥಿ ಆದರೆ ಅವರ ಕುಟುಂಬದ ವಾರ್ಷಿಕ ಆದಾಯ 1 ಲಕ್ಷದ ಒಳಗಿರಬೇಕು. ಪ್ರವರ್ಗ 1 ಕ್ಕೆ ಸೇರಿದ ವಿದ್ಯಾರ್ಥಿ ಆದರೆ, ಅವರ ಕುಟುಂಬದ ವಾರ್ಷಿಕ ಆದಾಯ 2.50 ಲಕ್ಷದ ಒಳಗಿರಬೇಕು. ಸುಮಾರು 7 ವರ್ಷಗಳಿಂದ ನಮ್ಮ ರಾಜ್ಯದಲ್ಲಿ ಓದಿದ್ದು, 75% ಗಿಂತ ಜಾಸ್ತಿ ಮಾರ್ಕ್ಸ್ ಪಡೆದಿರಬೇಕು.

ಕರ್ನಾಟಕದ ಯುನಿವರ್ಸಿಟಿ ಅಡಿಯಲ್ಲಿ ಬರುವ ಸರ್ಕಾರಿ, ಪ್ರೈವೇಟ್ ಅಥವಾ ಅನುದಾನಿತ ಕಾಲೇಜು ಅಥವಾ ಸಂಸ್ಥೆಯಲ್ಲಿ ಓದುತ್ತಿರಬೇಕು. ಹಾಸ್ಟೆಲ್ ಅಡ್ಮಿಷನ್, ಊಟ ವಸತಿ ಯೋಜನೆ ಇದಿಷ್ಟರಲ್ಲಿ ಒಂದು ಸೌಲಭ್ಯ ಪಡೆಯಲಿದ್ದಾರೆ ವಿದ್ಯಾರ್ಥಿಗಳು. ವಸತಿ ಕಾಲೇಜುಗಳು, ಸರ್ಕಾರದ ಹಾಸ್ಟೇಲ್ ಗಳು ಇವುಗಳಲ್ಲಿ ಅಡ್ಮಿಷನ್ ಸಿಗದೇ ಇರುವ ಮೆಟ್ರಿಕ್ ನಂತರದ ಕೋರ್ಸ್ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಸಿಗೋದು ಈ ಸೌಲಭ್ಯ.

ಒಂದು ಊರಿನಿಂದ ಇನ್ನೊಂದು ಸಿಟಿಗೆ ವಿದ್ಯುಭ್ಯಾಸಕ್ಕಾಗಿ ಹೋಗುವ ವಿದ್ಯಾರ್ಥಿಗಳು, ಹಾಗೆಯೇ ಹಳ್ಳಿಗಳಲ್ಲಿ ವಾಸ ಮಾಡುತ್ತಾ, ಮನೆಯಿಂದ ಕಾಲೇಜು 5ಕಿಮೀ ಗಿಂತ ಹೆಚ್ಚು ದೂರ ಇರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಒಂದೇ ಥರದ ಕೋರ್ಸ್ ನಲ್ಲಿ ಎರಡು ಸಾರಿ ಓದುವವರಿಗೆ ಈ ಸ್ಕಾಲರ್ಶಿಪ್ ಸಿಗೋದಿಲ್ಲ. ನಿಮ್ಮ ಬಳಿ ಆಕ್ಟಿವ್ ಆಗಿರುವ ಬ್ಯಾಂಕ್ ಅಕೌಂಟ್ ಇರಬೇಕು. ಇದೊಂದು ಇದ್ದರೆ, ಎಲ್ಲವೂ ಸುಲಭ ಆಗುತ್ತದೆ, ಸ್ಕಾಲರ್ಶಿಪ್ ಹಣ ನೇರವಾಗಿ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಸೇರುತ್ತದೆ.

ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್.!! ಈ ‘ಉಚಿತ ತರಬೇತಿ’ಗೆ ಅರ್ಜಿ ಆಹ್ವಾನ

ಅಗತ್ಯವಿರುವ ದಾಖಲೆಗಳು:

  • 10ನೇ ತರಗತಿ ಮಾರ್ಕ್ಸ್ ಕಾರ್ಡ್
  • ಪಿಯುಸಿ ಮಾರ್ಕ್ಸ್ ಕಾರ್ಡ್
  • ಆಧಾರ್ ಕಾರ್ಡ್
  • ಬ್ಯಾಂಕ್ ಪಾಸ್ ಬುಕ್
  • ಕ್ಯಾಸ್ಟ್ ಸರ್ಟಿಫಿಕೇಟ್
  • ಇನ್ಕಮ್ ಸರ್ಟಿಫಿಕೇಟ್
  • ಪಾಸ್ ಪೋರ್ಟ್ ಸೈಜ್ ಫೋಟೋ
  • ಅಡ್ಮಿಷನ್ ಫೀಸ್ ರೆಸಿಪ್ಟ್
  • ವಾಸಸ್ಥಳ ದೃಢೀಕರಣ ಪತ್ರ.

SSP ಪೋರ್ಟಲ್ ಮೂಲಕ ಸ್ಕಾಲರ್ಶಿಪ್ ಗೆ ಹೇಗೆ ಅರ್ಜಿ ಸಲ್ಲಿಸಬೇಕು?

  • ಮೊದಲಿಗೆ https://ssp.postmatric.karnataka.gov.in/ ಈ ಲಿಂಕ್ ಓಪನ್ ಮಾಡಿ, ಇಲ್ಲಿ ಬರುವ ಹೋಮ್ ಪೇಜ್ ನಲ್ಲಿ ಅಕೌಂಟ್ ಓಪನ್ ಮಾಡುವ ಆಪ್ಶನ್ ಸೆಲೆಕ್ಟ್ ಮಾಡಿ.
  • ಆಧಾರ್ ಕಾರ್ಡ್ ನಲ್ಲಿ ಇರುವ ಹಾಗೆ ನಿಮ್ಮ ಹೆಸರನ್ನು ಹಾಕಿ, ಜೆಂಡರ್ ಆಯ್ಕೆ ಮಾಡಿ, ಓಟಿಪಿ ಆಪ್ಶನ್ ಸೆಲೆಕ್ಟ್ ಮಾಡಿ, ಕ್ಯಾಪ್ಚ ಕೋಡ್ ಹಾಕಿ, ಅಪ್ಲಿಕೇಶನ್ ಗೆ ಮುಂದುವರಿಯಿರಿ.
  • ನಿಮ್ಮ ತಂದೆ ಅಥವಾ ತಾಯಿಯ ಆಧಾರ್ ಕಾರ್ಡ್ ನಂಬರ್ ಹಾಕಿ, ಫೋನ್ ನಂಬರ್ ಹಾಕಿ, ಮುಂದುವರಿಯಿರಿ. ಬಳಿಕ Submit ಮಾಡಿದರೆ ನಿಮ್ಮ ಫೋನ್ ಗೆ OTP ಬರುತ್ತದೆ.
  • OTP ಹಾಕಿದ ನಂತರ ನಿಮ್ಮ ID password ಲಾಗಿನ್ ಮಾಡುವುದಕ್ಕೆ ಸಿಗುತ್ತದೆ.. ಈ ಐಡಿ ಪಾಸ್ವರ್ಡ್ ಬಳಸಿ, SSP ಪೋರ್ಟಲ್ ಲಾಗಿನ್ ಮಾಡಬೇಕು, ಈಗ ಅಪ್ಲಿಕೇಶನ್ ನಲ್ಲಿ ನಿಮ್ಮ ಬಗ್ಗೆ ಕೇಳುವ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ನೀಡಿ, ಭರ್ತಿ ಮಾಡಬೇಕು. ಹಾಗೆಯೇ ಅಗತ್ಯವಿರುವ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು. ಈ ಮೂಲಕ ಅಪ್ಲಿಕೇಶನ್ ಸಲ್ಲಿಕೆ ಪ್ರಕ್ರಿಯೆ ಮುಗಿಸಿ, ನಂತರ ನೀವು ಅಪ್ಲಿಕೇಶನ್ ಸ್ಟೇಟಸ್ ಏನಿದೆ ಎನ್ನುವುದನ್ನ ಕೂಡ ssp ವೆಬ್ಸೈಟ್ ನಲ್ಲಿ ಚೆಕ್ ಮಾಡಿಕೊಳ್ಳಬಹುದು.

ಇತರೆ ವಿಷಯಗಳು:

ರಾಜ್ಯದ ವಿದ್ಯಾರ್ಥಿಗಳೇ ಗಮನಿಸಿ.!! ʻNMMSʼ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ಬ್ಯಾಂಕ್‌ ಖಾತೆದಾರರೇ ಹುಷಾರ್.!!‌ 1,000 ರೂಪಾಯಿಕ್ಕಿಂತ ಕಡಿಮೆ ಹಣ ಇದ್ರೆ ಎಚ್ಚರ..

Leave a Reply

Your email address will not be published. Required fields are marked *