ಹಲೋ ಸ್ನೇಹಿತರೆ, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ “ಯುವನಿಧಿ” ಯೋಜನೆಯು ಪದವಿ ಉತ್ತೀರ್ಣರಾದವರಿಗೆ ರೂ.3,000 ಮತ್ತು ಡಿಪ್ಲೋಮಾ ಉತ್ತೀರ್ಣರಾದವರಿಗೆ ರೂ.1,500 ರೂ. ವನ್ನು ನೀಡುತ್ತಿದ್ದು, ಯೋಜನೆಯ ಪ್ರಯೋಜನವನ್ನು ಪಡೆಯಲು ಸೇವಾ ಸಿಂಧು ಪೋರ್ಟಲ್ ನಲ್ಲಿ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಇದುವರೆಗೆ ಹಣ ಬರದೇ ಇದ್ದವರು ಈ ದಾಖಲೆ ನೀಡಿ ಹಣ ಪಡೆಯಲು ಸೂಚಿಸಲಾಗಿದೆ.
ಯುವನಿಧಿ ಫಲಾನುಭವಿಗಳಾಗಲು ಹೊಂದಿರಬೇಕಾದ ಅರ್ಹತೆ:
- 2023 ರಲ್ಲಿ ಪದವಿ, ಡಿಪ್ಲೊಮ ಉತ್ತೀರ್ಣರಾಗಿಬೇಕು.
- ಪದವಿ, ಡಿಪ್ಲೊಮ ನಂತರ ಕನಿಷ್ಠ 6 ತಿಂಗಳ ಅವಧಿಯವರೆಗೆ ಸರ್ಕಾರಿ, ಖಾಸಗಿ ಉದ್ಯೋಗ ಹೊಂದಿರಬಾರದು.
- ಸ್ವಯಂ ಉದ್ಯೋಗ ಹೊಂದಿರಬಾರದು. ಉನ್ನತ ವಿದ್ಯಾಭ್ಯಾಸ ಮುಂದುವರಿಸಿರಬಾರದು.
ಕರ್ನಾಟಕದಲ್ಲಿ ವಾಸವಿರುವವರು ಕನಿಷ್ಠ 3 ವರ್ಷಗಳವರೆಗೆ ಪದವಿ, ಡಿಪ್ಲೊಮಾದವರೆಗೆ ಅಧ್ಯಯನ ಮಾಡಿರಬೇಕು. ಈಗಾಗಲೇ ಈ ಯೋಜನೆಯ ಪ್ರಯೋಜನ ಪಡೆಯುತ್ತಿರುವವರು ನೊಂದಣಿ ಮಾಡಿಕೊಂಡಿರುವವರು ಪ್ರತಿ ತಿಂಗಳು 25ನೇ ತಾರೀಖಿನ ಒಳಗಾಗಿ ಸ್ವಯಂ ದೃಢೀಕೃತ ನಿರುದ್ಯೋಗಿ ಪ್ರಮಾಣ ಪತ್ರವನ್ನು ಪೋರ್ಟಲ್‌ನಲ್ಲಿ ಅಪ್‍ಲೋಡ್ ಮಾಡುವುದು ಕಡ್ಡಾಯವಾಗಿದೆ.
ಇದನ್ನು ಓದಿ: ವಾಹನ ಸವಾರರಿಗೆ ಬಿಗ್ ರಿಲೀಫ್! ಈ ಕಾರಣಕ್ಕಾಗಿ ಸಿಗ್ನಲ್ ಜಂಪ್ ಮಾಡಿದ್ರೆ ‘ದಂಡ’ ಇಲ್ಲ
ಯಾವುದೇ ತಿಂಗಳು ನಿರುದ್ಯೋಗ ಭತ್ಯೆ ಜಮೆಯಾಗದಿದ್ದರೆ ತಮ್ಮ ಮೂಲ ದಾಖಲೆಗಳನ್ನು ಈ ಕೆಳಕಂಡ ಕಚೇರಿಗಳಲ್ಲಿ ಪರಿಶೀಲನೆಗೆ ಒಳಪಡಿಸಬೇಕು. ಡಿಡಿಪಿಐ ಕಚೇರಿಯಲ್ಲಿ ಎಸ್‍ಎಸ್‍ಎಲ್‍ಸಿ ಪ್ರಮಾಣ ಪತ್ರ, ಹಾಗೂ ದ್ವಿತೀಯ ಪಿಯುಸಿ ಪ್ರಮಾಣ ಪತ್ರ ಹಾಗೂ ಡಿಪ್ಲೊಮ ಮತ್ತು ಪದವಿ ಪ್ರಮಾಣ ಪತ್ರಗಳನ್ನು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಗೆ ಭೇಟಿ ನೀಡಿ ತಮ್ಮ ದಾಖಲೆಗಳನ್ನು ಪರಿಶೀಲನೆಗೆ ಒಳಪಡಿಸಬೇಕು.
ಇತರೆ ವಿಷಯಗಳು:
ರಾಜ್ಯದಲ್ಲಿ ಹತ್ತು ಸಾವಿರ ಶಿಕ್ಷಕರ ನೇಮಕ.! ಸಚಿವ ಮಧು ಬಂಗಾರಪ್ಪ
ಮಳೆಯಿಂದ ಕೃಷಿ ಮತ್ತು ತೋಟಗಾರಿಕೆ ಬೆಳೆ ಹಾನಿಗೆ ಪರಿಹಾರ! ಮಹತ್ವದ ಮಾಹಿತಿ ನೀಡಿದ ಸಿದ್ದರಾಮಯ್ಯ