ಅಂತೂ ಯುವ ಪೀಳಿಗೆಯಿಂದ ದೂರ ಸರಿದ ಕೋಲ್ಡ್‌ ಡ್ರಿಂಕ್ಸ್.!!‌ ಕಾರಣ ಕೇಳಿ ಬೆಚ್ಚಿ ಬಿದ್ದಿದು ಯಾಕೆ??

ಹಲೋ ಸ್ನೇಹಿತರೇ, ತೂಕ ಇಳಿಕೆ ಮತ್ತು ಫಿಟ್‌ನೆಸ್‌ ಯುವ ಪೀಳಿಗೆಯ ದೊಡ್ಡ ಧ್ಯೇಯವಾಗಿದೆ. ಇದಕ್ಕಾಗಿ ಫುಡ್‌ ವಿಚಾರದಲ್ಲಿ ಸಿಕ್ಕಾಪಟ್ಟೆ ಕಟ್ಟುನಿಟ್ಟಾದ ಕ್ರಮಗಳ ಜೊತೆಗೆ ಆರೋಗ್ಯಕರ ಆಯ್ಕೆಗಳನ್ನೇ ಆರಿಸಿಕೊಳ್ಳುತ್ತಿದ್ದಾರೆ. ಫಾಸ್ಟ್‌ಫುಡ್‌ ಯುವ ಪೀಳಿಗೆಯನ್ನು ಸೆಳೆಯುತ್ತಿದ್ದರೂ ಕೂಡ ತೀರಾ ಕಡಿಮೆ ಪ್ರಮಾಣದಲ್ಲಿ ಅಥವಾ ಚೀಟ್‌ ಡೇ ಅಂತಹ ಡಯೆಟ್‌ ಇಲ್ಲದ ದಿನದಲ್ಲಿ ಇವುಗಳನ್ನು ತಿನ್ನುವುದಕ್ಕೆ ಆದ್ಯತೆಯನ್ನು ನೀಡ್ತಿದ್ದಾರೆ.

cold drinks ban
cold drinks ban

ಅದರಲ್ಲಿಯು 500 ಮಿಲಿ ಬಾಟಲಿಯಲ್ಲಿ 54-60 ಗ್ರಾಂ ಶುಗರ್‌ ಇರುವ ಕಾರ್ಬೊನೇಟೆಡ್ ಪಾನೀಯ ಅಂದ್ರೆ ಕೋಲ್ಡ್‌ ಡ್ರಿಂಗ್ಸ್‌ಗೆ ಗುಡ್‌ ಬಾಯ್‌ ಹೇಳುತ್ತಿದ್ದಾರೆ. ವಿಶೇಷವಾಗಿ Gen Z ( 1990-2010 ರ ನಡುವಿನಲ್ಲಿ ಜನಿಸಿದ ಮಕ್ಕಳು) ಪೀಳಿಗೆಯು ಈ ಪಾನೀಯಗಳನ್ನು ತಮ್ಮ ಆಹಾರದ ಪಟ್ಟಿಯಿಂದ ದೂರ ಇಡ್ತಿದ್ದಾರೆ. ಇಂದಿನ ಯುವ ಪೀಳಿಗೆಯು ಈ ನಿರ್ಧಾರವನ್ನು ಭಾರತದಲ್ಲಿ ತಂಪು ಪಾನೀಯಗಳ ಅಂತ್ಯವನ್ನು ಸೂಚಿಸುತ್ತಿದೆ ಎನ್ನುತ್ತಿವೆ ಎಂದು ವರದಿಗಳು ತಿಳಿಸುತ್ತವೆ.

ಬೇಡಿಕೆ ಇಲ್ಲದೇ ಕಾರ್ಬೊನೇಟೆಡ್ ಪಾನೀಯಗಳ ಬೆಲೆ ಇಳಿಕೆ

ಆಹಾರದ ಹಣದುಬ್ಬರದಿಂದ ದಿನಸಿಯಿಂದ ದಿನಬಳಕೆಯ ವಸ್ತುಗಳವರೆಗೂ ಎಲ್ಲದರ ದರ ಹೆಚ್ಚಾಗಿದೆ. ಆದರೆ ಕಾರ್ಬೊನೇಟೆಡ್ ಪಾನೀಯಗಳ ಬೆಲೆ ಮಾತ್ರ ಇಳಿಕೆ ಕಂಡಿದೆ. ಮಿರಿಂಡಾ, ಲಿಮ್ಕಾ ಮತ್ತು ಮೌಂಟೇನ್ ಡ್ಯೂ, ಹಾಗೂ ಸ್ಪ್ರೈಟ್‌ನಂತಹ ಬ್ರ್ಯಾಂಡ್‌ಗಳು ದರ ಇಳಿಕೆಯನ್ನು ಮಾಡಿವೆ. ಆನ್‌ಲೈನ್‌ನಲ್ಲಿ ಆಹಾರವನ್ನು ಆರ್ಡರ್ ಮಾಡಿದ್ರೆ, ಮೆಕ್‌ಡೊನಾಲ್ಡ್ಸ್, ಪಿಜ್ಜಾ ಹಟ್ ಅಥವಾ ಬರ್ಗರ್ ಕಿಂಗ್‌ನಂತಹವು ತಂಪು ಪಾನೀಯಗಳನ್ನು ಉಚಿತವಾಗಿ ನೀಡ್ತಿರೋದನ್ನು ನೀವು ಈಗಾಗಲೇ ನೀಡಿರಬಹುದು.

ಮಾರಾಟಗಾರರು ಸಹ ಕೋಲ್ಡ್‌ ಡ್ರಿಂಕ್ಸ್‌ ಬೇಡಿಕೆಯಲ್ಲಿ ಆಗುತ್ತಿರುವ ಇಳಿಕೆಯನ್ನು ಗಮನಿಸುತ್ತಿದ್ದಾರೆ. ಸುಮಾರು ಜನರು ಮಾರಾಟಗಾರರು ಹಾಗೂ ಗ್ರಾಹಕರು ಇದನ್ನು ಖರೀದಿ ಮಾಡುವುದು ಕಡಿಮೆಯಾಗಿದೆ ಎಂದಿದ್ದಾರೆ.

ಆರೋಗ್ಯಕರ ಜೀವನಶೈಲಿ

ಇತರ ತಲೆಮಾರುಗಳಿಗೆ ಹೋಲಿಸಿದರೆ Gen Z ಆರೋಗ್ಯಕರ ಜೀವನಶೈಲಿಯನ್ನು ಆರಿಸಿಕೊಳ್ಳುತ್ತಿದೆ. ಮಿಂಟೆಲ್‌ನ ಇತ್ತೀಚಿನ ಅಧ್ಯಯನವು ಭಾರತದಲ್ಲಿನ Gen Z ನ 33% ಜನರು ತಮ್ಮ ಚರ್ಮದ ಕಾಳಜಿಯನ್ನು ನಿರ್ವಹಿಸಲು ತ್ವಚೆ ಉತ್ಪನ್ನಗಳ ಮೇಲೆ ಆರೋಗ್ಯಕರ ಆಹಾರ ಮತ್ತು ಸರಿಯಾದ ನಿದ್ರೆಯಂತಹ ಜೀವನಶೈಲಿಯ ಬದಲಾವಣೆಗಳನ್ನು ಆರಿಸಿಕೊಳ್ಳುತ್ತಿದ್ದಾರೆ ಎಂದು ತೋರಿಸುತ್ತದೆ. ಆರೋಗ್ಯಕರ ಆಹಾರದ ಮೇಲೆ ಈ ಗಮನವು ತಂಪು ಪಾನೀಯಗಳಿಂದ ಅವರನ್ನು ದೂರ ಇರಿಸಿದೆ.

ತಂಪು ಪಾನೀಯಗಳು ಹೆಚ್ಚಾಗಿ ಸೇರಿಸಲಾದ ಸಕ್ಕರೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿರುತ್ತವೆ, ಇದು ಇನ್ಸುಲಿನ್ ಪ್ರತಿರೋಧ, ಮೆಟಾಬಾಲಿಕ್ ಸಿಂಡ್ರೋಮ್ ಮತ್ತು ಹೃದ್ರೋಗದ ಹೆಚ್ಚಿನ ಅಪಾಯದಂತಹ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದೆ. ಹೀಗಾಗಿಯೇ ಯುವಕರು ಈ ಸಕ್ಕರೆ ಪಾನೀಯಗಳನ್ನು ದೂರ ಮಾಡೋದಕ್ಕೆ ಆದ್ಯತೆ ನೀಡ್ತಿದ್ದಾರೆ.

ನೈಸರ್ಗಿಕ ಪದಾರ್ಥಗಳಿಗೆ ಆದ್ಯತೆ

ಪಾನೀಯಗಳನ್ನು ಖರೀದಿಸುವಾಗ Gen Z ನೈಸರ್ಗಿಕ ಪದಾರ್ಥಗಳಿಗೆ ಆದ್ಯತೆ ನೀಡ್ತಿದ್ದಾರೆ. ಹೆಚ್ಚಿನ ಸಕ್ಕರೆ ಸೇವನೆಯ ಪ್ರತಿಕೂಲ ಪರಿಣಾಮಗಳ ಬಗ್ಗೆ ಹೆಚ್ಚುತ್ತಿರುವ ಜಾಗೃತಿಯಿಂದಾಗಿ ಈ ರೀತಿಯ ಪಾನೀಯಗಳಿಗೆ ಗುಡ್‌ಬಾಯ್‌ ಹೇಳ್ತಿದ್ದಾರೆ.

ಪ್ರತಿಯೊಬ್ಬರ ಖಾತೆಗೂ ಸರ್ಕಾರದಿಂದ ಬರಲಿದೆ 46,715 ರೂ.! ಯಾವುದು ಈ ವೈರಲ್‌ ಸುದ್ದಿ

ಸಾಮಾಜಿಕ ಮಾಧ್ಯಮದ ಪ್ರಭಾವ

ಪತ್ರಿಕಾಗೋಷ್ಠಿಯಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಕೋಕ್ ಬಾಟಲಿಗಳನ್ನು ಪಕ್ಕಕ್ಕಿಟ್ಟಿದ್ದು ಎಲ್ಲರಿಗೂ ನೆನಪಿರಬಹುದು. ಈ ಅವರ ನಡವಳಿಕೆಯು ಸಾಮಾಜಿಕವಾದ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಅನಂತರ ಕೋಕಾ-ಕೋಲಾದ ಷೇರು ಬೆಲೆ 1.6% ರಷ್ಟು ಕುಸಿತವನ್ನು ಕಂಡಿತ್ತು. ಸಾಮಾಜಿಕ ಮಾಧ್ಯಮ ಮತ್ತು ಉನ್ನತ ಮಟ್ಟದ ಕ್ರೀಡಾಪಟುಗಳ ಈ ನಡವಳಿಕೆಯನ್ನು ಯುವಕರಲ್ಲೂ ಇಂತಹ ಪಾನೀಯಗಳನ್ನು ಕುಡಿಯಬಾರದು ಎಂಬ ಪ್ರಜ್ಞೆಯನ್ನು ಹುಟ್ಟು ಈಗಾಗಲೇ ಹಾಕಿದೆ.

ನೋ ಶುಗರ್‌ ಚಾಲೆಂಜ್

ಸಾಮಾಜಿಕ ಮಾಧ್ಯಮಗಳಲ್ಲಿ ನೋ ಶುಗರ್‌ ಚಾಲೆಂಜ್‌ ಹೆಚ್ಚು ವೈರಲ್‌ ಆಗುತ್ತಿರುವ ವಿಚಾರ. ಈ ಚಾಲೆಂಜ್‌ ಸ್ವೀಕರಿಸಿದವರು ಸಕ್ಕರೆ ಮುಕ್ತ ಆಹಾರಗಳನ್ನು ತೆಗೆದುಕೊಳ್ಳುತ್ತಾರೆ.

ಸಕ್ಕರೆಯನ್ನು ಒಂದು ತಿಂಗಳಗಳ ಕಾಲ ಏನಾಗಬಹುದು ಎಂದು ಅರಿತುಕೊಂಡಿರುವ ಯುವಕರು ನೋ ಶುಗರ್‌ ಚಾಲೆಂಜ್‌ ತೆಗೆದುಕೊಳ್ಳುವ ಮೂಲಕ ಇಂತಹ ಪಾನೀಯಗಳಿಂದ ದೂರವಿರ್ತಿದ್ದಾರೆ.

ಎನರ್ಜಿ ಡ್ರಿಂಕ್ಸ್ ಅತ್ಯಂತ ಕೆಟ್ಟ ಪರ್ಯಾಯ – ವೈದ್ಯರು

ತಂಪು ಪಾನೀಯಗಳಿಗೆ ಬೇಡಿಕೆ ಕಡಿಮೆಯಾಗುತ್ತಿರುವುದು ಸಕಾರಾತ್ಮಕ ಬೆಳವಣಿಗೆಯಂತೆ ತೋರುತ್ತಿದ್ದರೂ, ಭಾರತದಲ್ಲಿನ ಅನೇಕ ಜೆನ್ ಮಕ್ಕಳು ಎನರ್ಜಿ ಡ್ರಿಂಕ್ಸ್‌ಗಳನ್ನು ಆರಿಸಿಕೊಳ್ಳುತ್ತಿದ್ದಾರೆ. ಆದ್ರೆ ಇದು ಕೋಲ್ಡ್‌ ಡ್ರಿಂಕ್ಸ್‌ಗಿಂತ ಕೆಟ್ಟದಾದ ಪಾನೀಯ ಎನ್ನುತ್ತಾರೆ ವೈದ್ಯರು.

ದೊಡ್ಡ ಪ್ರಮಾಣದ ಕೆಫೀನ್, ಸಕ್ಕರೆ ಹಾಗೂ ಇತರೆ ಸೇರ್ಪಡೆಗಳಿಂದ ತುಂಬಿರುವ ಶಕ್ತಿ ಪಾನೀಯಗಳನ್ನು ಆರಿಸಿಕೊಳ್ಳುವ ಯುವ ಜನರು ಸಹ ಹೃದಯ ಸಮಸ್ಯೆಗಳು ಮತ್ತು ಅಧಿಕ ರಕ್ತದೊತ್ತಡ ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಹೊಂದಿರುತ್ತಾರೆ. ನಿರ್ಜಲೀಕರಣ ಹಾಗೂ ಆತಂಕ, ನಿದ್ರಾಹೀನತೆಗೂ ಕಾರಣವಾಗಿದೆ. ಇದರಿಂದಾಗಿ ಸ್ಥೂಲಕಾಯತೆ, ಕಿರಿಕಿರಿ, ಪ್ಯಾನಿಕ್ ಅಟ್ಯಾಕ್ ಸಂಭವಿಸಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ.

ಇತರೆ ವಿಷಯಗಳು:

ಭಾರತದಲ್ಲಿ ಬ್ಯಾನ್‌ ಆದ ಟೆಲಿಗ್ರಾಂ.!! ನೆಕ್ಸ್ಟ್ ಯಾವ ಆ್ಯಪ್ ಗೊತ್ತಾ??

MGNREGA ಕಾರ್ಡ್‌ ಇದ್ದರೆ ಸಿಗುತ್ತೆ ಬರೋಬ್ಬರಿ ₹1,60,000..!

Leave a Reply

Your email address will not be published. Required fields are marked *