ಚಿನ್ನದ ಬೆಲೆಯಲ್ಲಿ ದಿಢೀರನೆ 1,000 ರೂಪಾಯಿ ಕುಸಿತ!

ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ಚಿನ್ನದ ಬೆಲೆಯು ಕಡಿಮೆಯಾದ ನಂತರ ಖರೀದಿಯನ್ನು ಮಾಡೋಣ ಎಂದು ಕಾಯುತ್ತಿರುವ ಮಹಿಳೆಯರು ಸೇರಿದಂತೆ, ಚಿನ್ನದ ಪ್ರಿಯರಿಗೆ ಇದೀಗ ಭರ್ಜರಿ ಸಿಹಿ ಸುದ್ದಿ ಸಿಕ್ಕಿದೆ. ಚಿನ್ನದ ಬೆಲೆಯು ಒಂದೇ ಸಮನೆ ಏರಿಕೆಯಾಗುತ್ತಿದೆ ಎಂದು ಗೃಹಿಣಿಯರು & ಚಿನ್ನ ಖರೀದಿಯನ್ನು ಮಾಡಬೇಕಿದ್ದವರು ಬೇಸರವನ್ನು ಹೊರಹಾಕುತ್ತಿದ್ದರು.

Gold Silver Price

ಆದರೆ ಇದೀಗ ಇವರಿಗೆ ಭರ್ಜರಿ ಸುದ್ದಿ ಒಂದು ಸಿಕ್ಕಿದ್ದು, ಚಿನ್ನದ ಬೆಲೆಯಲ್ಲಿ ಈಗಾ 1,000 ರೂಪಾಯಿ ಕಡಿಮೆ ಆಗಿದೆ. ಹಾಗಾದ್ರೆ ಇಷ್ಟು ಬೆಲೆಯು ಹೇಗೆ ಕುಸಿಯಿತು? ಈ ಲೇಖನವನ್ನು ಕೊನೆಯವರೆಗೂ ಓದಿ.

ಬಂಗಾರಕ್ಕೆ ಸಿಕ್ಕಾಪಟ್ಟೆ ಬೆಲೆ ಬಂದಿರುವ ಕಾರಣ ಚಿನ್ನದ ಬೆಲೆಯು ದಿನದಿಂದ ದಿನಕ್ಕೆ ಭಾರಿ ಹೆಚ್ಚಳ ಕಂಡಿದೆ. ಭಾರತೀಯರು ಸಹ ಚಿನ್ನದ ಮೇಲೆಯ ಹೂಡಿಕೆಯನ್ನು ಮಾಡಲು ಮುಗಿಬೀಳುತ್ತಿದ್ದ ಕಾರಣಕ್ಕೆ, ಏಪ್ರಿಲ್ ತಿಂಗಳಲ್ಲಿ ಚಿನ್ನದ ಬೆಲೆ ಹೊಸ ಇತಿಹಾಸವನ್ನು ಬರೆದಿತ್ತು. ಆದರೆ ಇದೀಗ ಚಿನ್ನದ ಬೆಲೆಯು ಇಳಿಕೆಯ ಹಾದಿಗೆ ಮತ್ತೆ ಮರಳಿದೆ.

ಅದರಲ್ಲೂ ತನ್ನ ಗರಿಷ್ಠವಾದ ಬೆಲೆಯಿಂದ ಇದೀಗ ಚಿನ್ನದ ಬೆಲೆಯು ಸುಮಾರು 1,000 ರೂಪಾಯಿ ಅಷ್ಟು ಕಡಿಮೆಯಾಗಿದೆ. ಶುಭ ಸಮಾರಂಭಕ್ಕೆ ಚಿನ್ನದ ಖರೀದಿಯನ್ನು ಮಾಡಬೇಕೆಂದು, ಇಷ್ಟು ದಿನಗಳವರೆಗೆ ಕಾಯುತ್ತಿದ್ದ ಕನ್ನಡಿಗರಿಗೆ ಈ ಮೂಲಕ ಸಿಹಿಸುದ್ದಿ ಸಿಕ್ಕಿದೆ. ಹಾಗಾದ್ರೆ ಚಿನ್ನದ ಬೆಲೆಯು ಯಾವ ಯಾವ ನಗರದಲ್ಲಿ ಎಷ್ಟಿದೆ ಎಂದು ನೋಡೋಣ.

ಇನ್ನು ಆರು ದಿನಗಳಲ್ಲಿ ಪಿಎಂ ಕಿಸಾನ್‌ ಹಣ!

ಚಿನ್ನದ ಬೆಲೆ 1,000 ರೂ. ಕಡಿಮೆ!

ಜಾಗತಿಕವಾಗಿ 2 ಭೀಕರ ಯುದ್ಧಗಳು ನಡೆಯುತ್ತಿವೆ, ಇದೇ ಸಮಯದಲ್ಲಿ ದಿಢೀರ್ ಅಂತಾ ಇರಾನ್ ಸಹ ಇಸ್ರೇಲ್ ವಿರುದ್ಧ ದಾಳಿಯನ್ನು ಮಾಡಿತ್ತು. ಈ ಮೂಲಕವಾಗಿ ಕಿತ್ತಾಟ ಹೆಚ್ಚಾಗಿ, ಜಾಗತಿಕ ಆರ್ಥಿಕತೆ ಅಲ್ಲಾಡಿ ಹೋಗಿತ್ತು. ಅದರಲ್ಲು ಉಕ್ರೇನ್ & ರಷ್ಯಾ ಯುದ್ಧದ ನಂತರ ಪ್ಯಾಲೆಸ್ತೀನ್ & ಇಸ್ರೇಲ್ ಯುದ್ಧವು ಇಡೀ ಜಗತ್ತಿಗೆ ಆಘಾತವನ್ನು ನೀಡಿತ್ತು. ಇದರ ಜೊತೆಗೆ ಇಸ್ರೇಲ್ನ ವಿರುದ್ಧ ಬಾಂಬ್, ಮಿಸೈಲ್ ಹಾರಿಸಿ ತೊಡೆಯನ್ನು ತಟ್ಟಿತ್ತು ಇರಾನ್.

ಈ ಘಟನೆಯ ಹಿನ್ನೆಲೆಯಲ್ಲಿ ಚಿನ್ನದ ಬೆಲೆಯು ಏಪ್ರಿಲ್ ತಿಂಗಳಲ್ಲಿ ಗಗನಕ್ಕೆಯೆರಿತ್ತು. ಹಾಗೇ ಚಿನ್ನದ ಬೆಲೆಯು 1 ಲಕ್ಷ ರೂಪಾಯಿ ದಾಟುವ ಆತಂಕ ಸಹ ಕಾಡಿತ್ತು. ಕಳೆದ ತಿಂಗಳು, ಅಂದರೆ 2024ರ ಏಪ್ರಿಲ್ ತಿಂಗಳಲ್ಲಿ 24 ಕ್ಯಾರೆಟ್ ಚಿನ್ನ 73,596 ರೂಪಾಯಿಗೆ ತಲುಪಿತ್ತು. ಆದರೆ ಇದೀಗ ಚಿನ್ನದ ಬೆಲೆಯಲ್ಲಿ 1,000 ರೂಪಾಯಿ ಕಡಿಮೆ ಆಗಿದೆ.

ಚಿನ್ನದ ಬೆಲೆ ಮತ್ತಷ್ಟು ಕಡಿಮೆ ಆಗುತ್ತಾ?

ಹೌದು, ಈಗಾ ಚಿನ್ನದ ಮತ್ತು ಬೆಳ್ಳಿಯ ಬೆಲೆಯಲ್ಲಿ ಭಾರಿ ಇಳಿಕೆಯು ಕಾಣುತ್ತಿದೆ. ಭಾರತದಲ್ಲಿ ಇದೀಗ, 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 66,550 ರೂಪಾಯಿ ಇದೆ. 24 ಕ್ಯಾರಟ್‌ ಅಪರಂಜಿ ಚಿನ್ನದ ಬೆಲೆಯು 72,600 ರೂಪಾಯಿಗೆ ಕುಸಿತವನ್ನು ಕಂಡಿದೆ. ಈ ಮೂಲಕವಾಗಿ ಚಿನ್ನದ ಬೆಲೆಯು ಅದರ ಅತಿಹೆಚ್ಚು ಬೆಲೆಗೆ ಹೋಲಿಕೆಯನ್ನು ಮಾಡಿದರೆ ಬರೋಬ್ಬರಿ 1000 ರೂಪಾಯಿಯಷ್ಟು ಇಳಿಕೆ ಆಗಿದೆ.

ಇದು ಚಿನ್ನವನ್ನು ಖರೀದಿ ಮಾಡುವವರಿಗೆ ಖುಷಿಯನ್ನು ನೀಡಿದೆ. ಇನ್ನು 100 ಗ್ರಾಂ ಬೆಳ್ಳಿಯ ಬೆಲೆಯು 8,350 ರೂಪಾಯಿ ಇದ್ದರೆ. ವಿವಿಧ ದೇಶದಲ್ಲೂ ಬೆಳ್ಳಿಯ ಬೆಲೆಯು ಕುಸಿತವನ್ನು ಕಾಣುತ್ತಿದೆ. ಹೀಗಾಗಿ ಜನರಿಗೆ ಈ ಸುದ್ದಿಯು ಒಂದಷ್ಟು ಖುಷಿಯನ್ನು ನೀಡುತ್ತಿದೆ. ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಮತ್ತಷ್ಟು ಕಡಿಮೆ ಆಗಿ ಕೈಗೆಟುಕುವ ದರದಲ್ಲಿ ಸಿಗುವ ನಿರೀಕ್ಷೆಯು ಇದೆ.

ಇತರೆ ವಿಷಯಗಳು:

ಇಂದು ಕಿಸಾನ್ ಯೋಜನೆ ಪಾವತಿಯ ₹2000 ಸ್ವೀಕಾರ!!

ಈಗ ಈ ಜನರಿಗೆ 5 ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ಉಚಿತ ಚಿಕಿತ್ಸೆ

Leave a Comment