ಹೊಸ ವೇತನ ವ್ಯವಸ್ಥೆ ಜಾರಿ.! 50 ಕೋಟಿಗೂ ಹೆಚ್ಚು ಕಾರ್ಮಿಕರಿಗೆ ಸಿಗಲಿದೆ ನೇರ ಲಾಭ

ಹಲೋ ಸ್ನೇಹಿತರೇ, ದೇಶದಲ್ಲಿ ಕನಿಷ್ಠ ವೇತನ ಪದ್ದತಿಯನ್ನು ಕೊನೆಗೊಳಿಸಲು ಕೇಂದ್ರ ಸರ್ಕಾರ ಸಿದ್ಧತೆಯನ್ನು ನಡೆಸಿದೆ. ಬದಲಾಗಿ ಮುಂದಿನ ವರ್ಷದಿಂದ ದೇಶದಲ್ಲಿ ಹೊಸ ವ್ಯವಸ್ಥೆ ಜಾರಿಗೆ ಮಾಡಲು ಸರ್ಕಾರ ಮುಂದಾಗಿದೆ. ಇದರ ಬಗ್ಗೆ ಸಂಪೂರ್ಣ ವಿವರವನ್ನು ತಿಳಿಯಲು ಲೇಖನವನ್ನು ಓದಿ. 

minimum wage for government employees

ದೇಶದಲ್ಲಿ ಕನಿಷ್ಠ ವೇತನ ವ್ಯವಸ್ಥೆಯನ್ನು ಕೊನೆಗೊಳಿಸಲು ಕೇಂದ್ರ ಸರ್ಕಾರ ಸಿದ್ಧತೆಯನ್ನು ನಡೆಸಿದೆ. ಬದಲಾಗಿ ಮುಂದಿನ ವರ್ಷದಿಂದ ದೇಶದಲ್ಲಿ ಲಿವಿಂಗ್ ವೇಜ್ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು. ಈ ವ್ಯವಸ್ಥೆಯನ್ನು ರೂಪಿಸಲು ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ILO) ದಿಂದ ತಾಂತ್ರಿಕ ನೆರವು ಕೋರಲಾಗಿದೆ. ಲಿವಿಂಗ್ ವೇಜ್ ಕನಿಷ್ಟ ವೇತನವಾಗಿದೆ, ಕೆಲಸಗಾರನಿಗೆ ತನ್ನ ಮೂಲಭೂತ ಅಗತ್ಯಗಳನ್ನು ಪೂರೈಸಲು ಅನುವು ಮಾಡಿಕೊಡಲಾಗಿದೆ. ವಸತಿ, ಆಹಾರ, ಆರೋಗ್ಯ ರಕ್ಷಣೆ, ಶಿಕ್ಷಣ & ಬಟ್ಟೆಯನ್ನು ಒಳಗೊಂಡಿದೆ. ಹೊಸ ವೇತನ ವ್ಯವಸ್ಥೆ ಜಾರಿಗೆ ILO ಅನುಮೋದನೆಯನ್ನು ನೀಡಿದೆ ಎಂದು ಕೂಡಾ ತಿಳಿಸಲಾಗಿದೆ. ಲಿವಿಂಗ್ ವೇಜ್ ಕನಿಷ್ಠ ವೇತನಕ್ಕಿಂತ ಜಾಸ್ತಿ ಇರುತ್ತದೆ ಎಂದು ಸರ್ಕಾರ ತಿಳಿಸಿದೆ. 

ಭಾರತದಲ್ಲಿದ್ದಾರೆ 50 ಕೋಟಿಗೂ ಹೆಚ್ಚು ಕಾರ್ಮಿಕರು : 

ಮಾರ್ಚ್ 14 ರಂದು ಜಿನೀವಾದಲ್ಲಿ ನಡೆದ ILO ನ ಆಡಳಿತ ಮಂಡಳಿ 350 ನೇ ಸಭೆಯು ಕನಿಷ್ಠ ವೇತನಕ್ಕೆ ಸಂಬಂಧಿಸಿದ ತಿದ್ದುಪಡಿಯನ್ನು ಅನುಮೋದಿಸಿದೆ. ಭಾರತದಲ್ಲಿ ಶೇ. 90ರಷ್ಟು ಅಸಂಘಟಿತ ವಲಯಗಳಲ್ಲಿ 50 ಕೋಟಿಗೂ ಹೆಚ್ಚಿನ ಕಾರ್ಮಿಕರಿದ್ದಾರೆ. ಅವರು ದಿನಕ್ಕೆ ಕನಿಷ್ಠ 176 ರೂ/ ಅದಕ್ಕಿಂತ ಹೆಚ್ಚಿನ ವೇತನವನ್ನು ಪಡೆಯುತ್ತಾರೆ. ಇದು ನೀವು ಯಾವ ರಾಜ್ಯದಲ್ಲಿ ವಾಸಿಸುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿದೆ..

ಉಚಿತ ಟ್ಯಾಬ್ಲೆಟ್ ಯೋಜನೆ: ಇಂತಹ ವಿದ್ಯಾರ್ಥಿಗಳಿಗೆ ಸಿಗಲಿದೆ ಉಚಿತ ಟ್ಯಾಬ್ಲೆಟ್!

ಇದು ರಾಜ್ಯಗಳಿಗೆ ಕಡ್ಡಾಯವಲ್ಲ :

2017ರಿಂದ ರಾಷ್ಟ್ರೀಯ ಮಟ್ಟದ ಕನಿಷ್ಠ ವೇತನ ಪರಿಷ್ಕರಣೆಯಾಗಿಲ್ಲ. ಇದು ಈ ಪರಿಷ್ಕರಣೆ ರಾಜ್ಯಗಳಿಗೆ ಕಡ್ಡಾಯವಾಗಿಲ್ಲ. ಆದ್ದರಿಂದ ಕೆಲವು ರಾಜ್ಯಗಳು ಇನ್ನೂ ಇದಕ್ಕಿಂತಲೂ ಕಡಿಮೆ ವೇತನ ನೀಡುತ್ತಿವೆ. 2019ರಲ್ಲಿ ಪರಿಚಯಿಸಲಾದ  ವೇತನ ಸಂಹಿತೆ ಇನ್ನೂ ಜಾರಿಗೆ ಬಂದಿಲ್ಲಾ. ಇದರಲ್ಲಿ ಎಲ್ಲಾ ರಾಜ್ಯಗಳಿಗೆ ಕಡ್ಡಾಯವಾಗಿ ಜಾರಿಗೆ ತರಬೇಕಾದ ಪೇ ಸ್ಕೇಲ್ ಅನ್ನು ಪ್ರಸ್ತಾಪನೆ ಮಾಡಿದೆ.  

ಭಾರತವು ILO ಸ್ಥಾಪಕ ಸದಸ್ಯ. ಅಲ್ಲದೆ, 2022 ರಿಂದ ಅದರ ಆಡಳಿತ ಮಂಡಳಿಯ ಸದಸ್ಯ ರಾಷ್ಟ್ರವಾಗಿದ್ದು. ಸುಸ್ಥಿರ ಅಭಿವೃದ್ಧಿ ಗುರಿಯನ್ನು (ಎಸ್‌ಡಿಜಿ) ಸಾಧಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕನಿಷ್ಠ ವೇತನವನ್ನು ಲಿವಿಂಗ್ ವೇಜ್ ನೊಂದಿಗೆ ಬದಲಿಸುವುದರಿಂದ ಲಕ್ಷಾಂತರ ಜನರನ್ನು ಬಡತನದಿಂದ ಮೇಲೆತ್ತುವ ಭಾರತದ ಪ್ರಯತ್ನ ಸಾಕಾರವಾಗಲಿದೆ ಎನ್ನಲಾಗಿದೆ. 

ಇತರೆ ವಿಷಯಗಳು:

ಇಂದು ಕಿಸಾನ್ ಯೋಜನೆ ಪಾವತಿಯ ₹2000 ಸ್ವೀಕಾರ!!

ಈಗ ಈ ಜನರಿಗೆ 5 ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ಉಚಿತ ಚಿಕಿತ್ಸೆ

Leave a Comment