ಹಲೋ ಸ್ನೇಹಿತರೇ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಅಧಿಕೃತ ಪ್ರಕಟಣೆಯನ್ವಯ ಪಡಿತರ ಚೀಟಿ ಹೊಂದಿರುವ ಗ್ರಾಹಕರು ತಮ್ಮ ಕಾರ್ಡನಲ್ಲಿರುವ ಎಲ್ಲಾ ಸದಸ್ಯರ ಇ-ಕೆವೈಸಿ ಮಾಡಿಸುವಂತೆ ಸೂಚನೆ ನೀಡಲಾಗಿದೆ.
ಇ-ಕೆವೈಸಿ ಏಕೆ ಮಾಡಿಸಬೇಕು?
1) ನೈಜ ಫಲಾನುಭವಿಗಳಿಗೆಯೇ ಪ್ರತಿ ತಿಂಗಳು ಆಹಾರ ಧಾನ್ಯ ತಲುಪುತ್ತಿರುವುದನ್ನು ಖಚಿತಪಡಿಸಿಕೊಳ್ಳಲು.
2) ನಕಲಿ ರೇಷನ್ ಕಾರ್ಡದಾರರನ್ನು ಖಚಿತಪಡಿಸಿಕೊಳ್ಳಲು ಇ-ಕೆವೈಸಿ ಮಾಡಿಸಲು ಸೂಚಿಸಲಾಗಿದೆ.
3) ರೇಷನ್ ಕಾರ್ಡನಲ್ಲಿ ಮರಣ ಹೊಂದಿದ ಸದಸ್ಯರನ್ನು ಗುರುತಿಸಿ ಅಂತಹ ಸದಸ್ಯರನ್ನು ಕಾರ್ಡನಿಂದ ತೆಗೆದು ಹಾಕಲು.
ಸರ್ಕಾರದಿಂದ ಗುಡ್ ನ್ಯೂಸ್..! ಕುಟುಂಬದವರ ಹೆಸರಿನಲ್ಲಿ ʼNPSʼ ಖಾತೆ ತೆರೆಯಲು ಅವಕಾಶ!
ರೇಷನ್ ಕಾರ್ಡ್ ಇ-ಕೆವೈಸಿ ಅನ್ನು ಎಲ್ಲಿ ಮಾಡಿಸಬೇಕು?
ರೇಷನ್ ಕಾರ್ಡನಲ್ಲಿರುವ ಸದಸ್ಯರು ಖುದ್ದು ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಯನ್ನು ರೇಷನ್ ಕಾರ್ಡನಲ್ಲಿರುವ ಮೊಬೈಲ್ ಸಂಖ್ಯೆಯ ಸಮೇತ ಕಚೇರಿ ವೇಳೆಯಲ್ಲಿ ಭೇಟಿ ಮಾಡಿ ಇ-ಕೆವೈಸಿ ಅನ್ನು ಮಾಡಿಕೊಳ್ಳಬೇಕು.
ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಸೂಚನೆಯ ಪ್ರಕಾರ 31 ಆಗಸ್ಟ್ 2024 ರ ಒಳಗಾಗಿ ಪಡಿತರ ಚೀಟಿ ಹೊಂದಿರುವ ಗ್ರಾಹಕರು ನ್ಯಾಯಬೆಲೆ ಅಂಗಡಿಯನ್ನು ಭೇಟಿ ಮಾಡಿ ಇ-ಕೆವೈಸಿ ಮಾಡಿಸಲು ಸೂಚನೆ ನೀಡಲಾಗಿದೆ.
ಇತರೆ ವಿಷಯಗಳು:
ಉಪನ್ಯಾಸಕರ ಕೆಲಸದ ಸಮಯ ಹೆಚ್ಚಳಕ್ಕೆ ಆದೇಶ!
ನಿರುದ್ಯೋಗಿಗಳಿಗೆ ಗುಡ್ ನ್ಯೂಸ್! ಪ್ರತಿ ತಿಂಗಳು ಪಡೆಯಬಹುದು ₹39,000